49 ದಿನಗಳನ್ನು ಸಮುದ್ರದ ಮಧ್ಯೆ ಕಳೆದ 19 ವರ್ಷದ ಯುವಕ

Update: 2018-09-24 16:52 GMT

ಜಕಾರ್ತ, ಸೆ.24: ಇಂಡೋನೇಷ್ಯಾದ ಹದಿಹರೆಯದ ಯುವಕನೊಬ್ಬ ದಿಕ್ಕು ದೆಸೆಯಿಲ್ಲದೇ ಸಮುದ್ರದಲ್ಲಿ ಅಲೆಯುತ್ತಾ 49 ದಿನಗಳನ್ನು ಮೀನುಗಾರಿಕೆ ಗುಡಿಸಲಲ್ಲೇ ಕಳೆದ ಪ್ರಕರಣ ಕೊನೆಗೂ ಸುಖಾಂತ್ಯವಾಗಿದೆ. ಪನಾಮಾ ಧ್ವಜವಿದ್ದ ಹಡಗು ಈತನನ್ನು ಪತ್ತೆ ಮಾಡಿ ರಕ್ಷಣಾ ಕಾರ್ಯ ಮೂಲಕ ಮನೆಗೆ ಸುರಕ್ಷಿತವಾಗಿ ತಲುಪಿಸಿದೆ.

ಅಲ್ದಿ ನೊವೆಲ್ ಅದಿಲಿಂಗ್ (19) ಎಂಬ ಸುಲವೇಸಿ ಮೂಲದ ಯುವಕ ಮೀನುಗಾರಿಕೆ ದೋಣಿಯೊಂದರಲ್ಲಿ ಬೆಳಕಿನ ವ್ಯವಸ್ಥೆ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ. ಸಮುದ್ರದಲ್ಲಿ 125 ಕಿಲೋಮೀಟರ್ ಆಚೆಯ ರೋಂಪೊಂಗ್ ಎಂಬಲ್ಲಿ ಈತ ಕೆಲಸ ಮಾಡುತ್ತಿದ್ದ.. ಈತನ ತಂದೆ ಹದಿನಾರನೇ ವಯಸ್ಸಿನಿಂದಲೂ ಈ ಕೆಲಸ ಮಾಡುತ್ತಾ ಬಂದ ಹಿನ್ನೆಲೆಯಲ್ಲಿ ಈ ಕೆಲಸವನ್ನು ಯುವಕನಿಗೆ ವಹಿಸಲಾಗಿತ್ತು.

ಪ್ರತಿ ವಾರ ಆತನ ಕಂಪನಿಯ ಕೆಲವರು ಆಗಮಿಸಿ, ಬಲೆ ಸಹಾಯದಿಂದ ಮೀನು ಹಿಡಿದು ಒಯ್ಯುವ ಸಂದರ್ಭದಲ್ಲಿ ಆತನಿಗೆ ಆಹಾರ, ನೀರು ಮತ್ತು ಇಂಧನ ವ್ಯವಸ್ಥೆ ಮಾಡುತ್ತಾರೆ. ಪುಟ್ಟ ತೇಲುವ ಗುಡಿಸಲಲ್ಲಿ ಈತನ ವಾಸ. ಮನಾಡೊ ಸಾಗರ ಪ್ರದೇಶದಲ್ಲಿ ಈ ಗುಡಿಸಲು ಇದೆ. ಇದನ್ನು ಸಮುದ್ರ ಕಿನಾರೆಯಿಂದ ದೊಡ್ಡ ಹಗ್ಗವೊಂದರಲ್ಲಿ ಇದನ್ನು ಕಟ್ಟಿಹಾಕಲಾಗಿತ್ತು. ಜುಲೈ ಮಧ್ಯದಲ್ಲಿ ಗಾಳಿಗೆ ಹಗ್ಗ ಕತ್ತರಿಸಿಹೋಗಿದ್ದರಿಂದ ಅಲ್ದಿ ಅಲೆಮಾರಿಯಾಗಿ ಅಲೆಯುವ ಪರಿಸ್ಥಿತಿ ಉಂಟಾಗಿತ್ತು.

ಕೆಲವೇ ದಿನದ ಆಹಾರ ಹೊಂದಿದ್ದ ಈತ ಬಳಿಕ ಮೀನು ಹಿಡಿದು, ತನ್ನ ಗುಡಿಸಲಿನ ಮರ ಉರಿಸಿ ಅದನ್ನು ಬೇಯಿಸಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದ. ಸಮುದ್ರ ನೀರನ್ನು ತನ್ನ ಬಟ್ಟೆಯಿಂದ ಸೋಸಿ ಉಪ್ಪಿನ ಅಂಶ ಕಡಿಮೆ ಮಾಡಿಕೊಂಡು ಕುಡಿಯುತ್ತಿದ್ದ. 10 ಹಡಗುಗಳು ಆ ಮಾರ್ಗದ ಮೂಲಕ ಹಾದು ಹೋಗಿದ್ದು, ಕೊನೆಗೆ ಪನಾಮಾ ಧ್ವಜ ಹೊಂದಿದ್ದ ಎಂ.ವಿ.ಅರ್ಪೆಜಿಯೊ ಎಂಬ ಹಡಗು ರಕ್ಷಿಸಿದೆ ಎಂದು ಒಸಾಕಾದಲ್ಲಿ ಇಂಡೋನೇಷ್ಯಾದ ಕಾನ್ಸುಲೇಟ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News