ಅಕ್ರಮ ಗಾಂಜಾ ಮಾರಾಟ: ಓರ್ವನ ಸೆರೆ

Update: 2018-09-24 18:15 GMT

ಉಡುಪಿ, ಸೆ.24: ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಉದ್ಯಾವರ ಗ್ರಾಮದ ಹಲಿಮಾ ಸಾಬ್ಜು ಹಾಲ್ ಎದುರು ಸೆ.24ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ.

ಬಂಧಿತನನ್ನು ಮಲ್ಲಾರು ಗ್ರಾಮದ ಕೋಟೆ ರಸ್ತೆಯ ಮುಹಮ್ಮದ್ ಖಾಸಿಂ ಉಬೇದುಲ್ಲಾ(53) ಎಂದು ಗುರುತಿಸಲಾಗಿದೆ. ಈತನಿಂದ 45ಸಾವಿರ ರೂ. ಮೌಲ್ಯದ 1 ಕಿಲೋ 212 ಗ್ರಾಂ ಗಾಂಜಾ, 4,000ರೂ. ಗಾಂಜಾ, ಒಂದು ಮೊಬೈಲ್ ಹಾಗೂ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News