ಸೆ.27;ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ದಶಮಾನೋತ್ಸವ ಸಮಾರಂಭದ ಸಮಾರೋಪ

Update: 2018-09-24 19:08 GMT

ಮಂಗಳೂರು, ಸೆ.24:ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ದಶಮಾನೋತ್ಸವ ಸಮಾರಂಭದ ಸಮಾರೋಪ ಸಮಾರಂಭ ಸೆ.27ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಜಗದೀಶ್ ಎಮ್. ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್,ಮಂಗಳೂರು ಮನಪಾ ಸದಸ್ಯ ರಾಮದಾಸ್ ಪ್ರಭು,ಸಿಂಫೋನಿ ಮ್ಯೂಸಿಕ್ ಮಾಲಕ ಲೋಯ್ ನರೋನ್ಹಾ ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಲಯನ್ಸ್ ಕಿಶೋರ್ ಡಿ ಶೆಟ್ಟಿ,ದಾಯ್ಜಿವಲ್ಡ್ ನಿರ್ದೇಶಕ ಲಾರೆನ್ಸ್ ಡಿ ಸೋಜ,ಡೆಲ್ಟಾ ಇಂಡಸ್ಟ್ರೀಸ್ ಅಧ್ಯಕ್ಷ ಬದ್ರುದ್ಧೀನ್ ಪಣಂಬೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಸಾಧಕರುಗಳಾದ ಲಕ್ಷ್ಮೀ ನಾರಾಯಣ ಕಾರ್ಕಳ,(ಹಾರ್ಮೋನಿಯಮ್ ವಾದಕರು),ಪುತ್ತೂರು ಪಾಡುರಂಗ ನಾಯಕ್(ಹಿಂದುಸ್ಥಾನಿ ಗಾಯಕರು),ವಸಂತ ಕದ್ರಿ( ಸಂಗೀತ ನಿರ್ದೇಶಕರು),ಹೆರಾಲ್ಡ್ ಸಿರಿಲ್ ಡಿ ಸೋಜ (ಸಿಲ್ವರ್ ಬ್ಯಾಂಡ್),ರಹೀಂ ಬಿ.ಸಿ ರೋಡ್(ಕವಿ ,ಗಾಯಕರು),ದೇವರಾಜ ಆಚಾರ್ಯ (ಮ್ಯಾಂಡೋಲಿನ್ ವಾದಕರು),ಕ್ಲಾಡ್ ಡಿ ಸೋಜ (ಕೊಂಕಣಿ ಸಂಗೀತ), ಕೆ.ಕೆ.ನೌಶಾದ್ (ಶ್ಯಾಡ್ಸ್ ಇವೆಂಟ್ಸ್ ಸಂಗೀತ ನಿರ್ದೇಶಕರು),ಎ.ಕೆ.ವಿಜಯ್ (ಚಲನ ಚಿತ್ರ ಸಂಗೀತ)ಭರತ್ ಕುಮಾರ್ ಕಾಸರಗೋಡ್(ಹಿರಿಯ ಸಂಗೀತ ಕಲಾವಿದರು),ಕೆ.ಆರ್.ಕಾರಂತ್ (ತಬ್ಲ ವಾದಕರು),ಇವರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಜಗದೀಶ್ ಎಮ್ ಶೆಟ್ಟಿ ತಿಳಿಸಿದ್ದಾರೆ.

ಸ್ವರ ಕುಡ್ಲಾ:- 15ವರ್ಷಕ್ಕೆ ಮೇಲ್ಪಟ್ಟ ವಿದ್ಯಾರ್ಥಿಗಳ ಧ್ವನಿ ಪರೀಕ್ಷೆಯ ಪ್ರಥಮ ಹಂತದ ಸ್ಪರ್ಧೆ ಸೆ.25ರಂದು ಡಾನ್ ಬೋಸ್ಕೊ ಸಭಾಂಗಣದಲ್ಲಿ ನಡೆಯಲಿದೆ.ಆಯ್ಕೆಯಾದವರ ಅಂತಿಮ ಸುತ್ತು ಸೆ.27ರಂದು ಪುರಭವನದಲ್ಲಿ ನಡೆಯಲಿದೆ.ಸಂಜೆ ವಿಜೇತರಿಗೆ ಬಹುಮಾನ ಹಾಗೂ ಅವರಿಂದ ಚಿತ್ರಗೀತೆ,ಒಕ್ಕೂಟದ ಸದಸ್ಯರಿಂದ ವಾದ್ಯಗೋಷ್ಠಿ ಸಂಗೀತ ಮತ್ತು ದೇಶ ಭಕ್ತಿ ಸಮೂಹ ಗಾನ ನಡೆಯಲಿದೆ ಎಂದು ಜಗದೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದಶಮನೋತ್ಸವ ಸಮಿತಿಯ ಅಧ್ಯಕ್ಷ ತೋನ್ಸೆ ಪುಷ್ಕಳ ಕುಮಾರ್,ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರಳೀಧರ ಕಾಮತ್,ಕೋಶಾಧಿಕಾರಿ ರಂಜನ್ ದಾಸ್,ಜೊತೆ ಕಾರ್ಯದರ್ಶಿ ಮಲ್ಲಿಕಾ ಶೆಟ್ಟಿಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News