ಸೆ.26: ಟೋಲ್‌ಗೇಟ್ ವಿರೋಧಿ ಪಾದಯಾತ್ರೆ

Update: 2018-09-24 19:09 GMT

ಮಂಗಳೂರು, ಸೆ.24: ಸುರತ್ಕಲ್ ಸಮೀಪದ ಎನ್‌ಐಟಿಕೆ ಬಳಿಯ ಟೋಲ್‌ಗೇಟ್ ತೆರವುಗೊಳಸಬೇಕು, ನಂತೂರು ಸುರತ್ಕಲ್ ಹೆದ್ದಾರಿ ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಸೆ.26ರಂದು ಕೂಳೂರಿನಿಂದ ಸುರತ್ಕಲ್ ಟೋಲ್ ಕೇಂದ್ರದವರೆಗೆ ಪಾದಯಾತ್ರೆ ನಡೆಸಲಿದೆ. ಬೆಳಗ್ಗೆ 9:30ಕ್ಕೆ ಕೂಳೂರು ಜಂಕ್ಷನ್‌ನಲ್ಲಿ ಪಾದಯಾತ್ರೆಗೆ ಚಾಲನೆ ದೊರೆಯಲಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಮಧ್ಯಾಹ 1:30ಕ್ಕೆ ಟೋಲ್ಗೇಟ್ ಸಮೀಪ ಪ್ರತಿಭಟನಾ ಸಭೆ ನಡೆಯಲಿದೆ.

ಪಾದಯಾತ್ರೆಗೆ ಸುರತ್ಕಲ್ ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘ, ಕಿನ್ನಿಗೋಳಿ ವಲಯ ಲಾರಿ ಮಾಲಕರ ಸಂಘ, ತ್ರಿಚಕ್ರ ಟೆಂಪೊ ಚಾಲಕರ ಮಾಲಕರ ಸಂಘ ಸುರತ್ಕಲ್, ಗೂಡ್ಸ್ ಟೆಂಪೊ ಚಾಲಕರ ಸಂಘ ಸುರತ್ಕಲ್, ಸುರತ್ಕಲ್ ಆಟೋ ಚಾಲಕರ ಯೂನಿಯನ್, ಆನ್‌ಲೈನ್ ಟ್ಯಾಕ್ಸಿ ಓನರ್ಸ್ ಅಸೋಸಿಯೇಶನ್, ನಾಗರಿಕ ಸಮಿತಿ ಕುಳಾಯಿ, ಗೋಪಾಲಕೃಷ್ಣ ಭಜನಾ ಮಂದಿರ ಉರುಂದಾಡಿ, ನ್ಯೂ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ, ಟ್ರಾನ್ಸ್ಪೋರ್ಟ್ ವರ್ಕರ್ಸ್ ಯೂನಿಯನ್ ಸುರತ್ಕಲ್, ಜಯ ಕರ್ನಾಟಕ ಸುರತ್ಕಲ್, ಡಿವೈಎಫ್‌ಐ ಸುರತ್ಕಲ್ ವಲಯ ಸಹಿತ ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ ಎಂದು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News