'ವಿಶುವಲಿಂಗ್ ಟೆನ್ಯಾಸನ್’ ಸ್ಪರ್ಧೆ; ಮಂಗಳಗಂಗೋತ್ರಿ ಪದವಿ ವಿದ್ಯಾರ್ಥಿ ತಂಡಕ್ಕೆ ಪ್ರಶಸ್ತಿ

Update: 2018-09-25 13:42 GMT

ಕೊಣಾಜೆ,ಸೆ.25: ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತಿ ಆಲ್ಪ್ರೇಡ್ ಲಾರ್ಡ್ ಟೆನಿಸ್ನ ಸಾಹಿತ್ಯಕ್ಕೆ ಸಂಬಂಧಪಟ್ಟ ಅಂತರ್ ಕಾಲೇಜು ವಿಚಾರಸಂಕಿರಣದಲ್ಲಿ 'ವಿಶುವಲಿಂಗ್ ಟೆನ್ಯಾಸನ್’ ಶಿರ್ಷಿಕೆಯಡಿಯಲ್ಲಿ ಪ್ರಸ್ತುತಪಡಿಸಿದ ಸೆಮಿನಾರ್ ಹಾಗೂ ಮಾಡೆಲ್ ಸ್ಪರ್ಧೆಯಲ್ಲಿ ಮಂಗಳಗಂಗೋತ್ರಿಯ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. 

ಸ್ಪರ್ಧೆಯಲ್ಲಿ ನಫೀಸಾ ಸಮಿಹ, ಧನ್ಯಶ್ರೀ, ಪಾತೀಮತ್ ಆಫೀಯಾ, ಪ್ರಜನ್ಯಾ, ಶಾಂತಿಪ್ರಿಯಾ ಭಾಗವಹಿಸಿದ್ದರು. ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನಿತಾ ರವಿಶಂಕರ್, ಉಪನ್ಯಾಸಕರಾದ ಮಿಯಾಜ್, ಲಿಜ್‍ಬೆತ್ ಶೈನ್ ಮಾರ್ಗದರ್ಶನನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News