ಬ್ರಿಟಿಶ್ ಸೇನೆಯಲ್ಲಿರುವ ಸಿಖ್ ಸೈನಿಕನಿಂದ ಮಾದಕ ದ್ರವ್ಯ ಸೇವನೆ; ವಜಾಗೊಳ್ಳುವ ಸಾಧ್ಯತೆ

Update: 2018-09-25 14:26 GMT

ಸಾಬೀತುಲಂಡನ್, ಸೆ. 25: ಬ್ರಿಟಿಶ್ ರಾಣಿ ದ್ವಿತೀಯ ಎಲಿಝಬೆತ್‌ರ ಹುಟ್ಟುಹಬ್ಬ ಸಮಾರಂಭದ ವೇಳೆ ನಡೆದ ಪಥಸಂಚಲನದಲ್ಲಿ ಪೇಟ ಧರಿಸಿ ಇತಿಹಾಸ ನಿರ್ಮಿಸಿದ್ದ 22 ವರ್ಷದ ಸಿಖ್ ಸೈನಿಕ ಮಾದಕ ದ್ರವ್ಯ ಕೊಕೇನ್ ಸೇವಿಸಿರುವುದು ಸಾಬೀತಾಗಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಹಾಗಾಗಿ, ಅವರು ಸೇವೆಯಿಂದ ವಜಾಗೊಳ್ಳುವ ಸಾಧ್ಯತೆಯಿದೆ. ಜೂನ್‌ನಲ್ಲಿ ನಡೆದ ‘ಟ್ರೂಪಿಂಗ್ ದ ಕಲರ್’ ಪಥಸಂಚಲನದಲ್ಲಿ ಚರಣ್‌ಪ್ರೀತ್ ಸಿಂಗ್ ಲಾಲ್ ಮೊದಲ ಬಾರಿ ಪೇಟ ಧರಿಸಿದ್ದರು ಹಾಗೂ ಅದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು.

ಆದರೆ, ಕಳೆದ ವಾರ ಅವರ ಬರಾಕ್‌ನಲ್ಲಿ ನಡೆದ ದಿಢೀರ್ ಮಾದಕ ದ್ರವ್ಯ ಪರೀಕ್ಷೆಯಲ್ಲಿ ಅವರು ಅನುತ್ತಿರ್ಣರಾಗಿದ್ದಾರೆ. ಅವರ ದೇಹದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೊಕೇನ್ ಅಂಶ ಪತ್ತೆಯಾಗಿದೆ ಎಂದು ‘ದ ಸನ್’ ಪತ್ರಿಕೆ ವರದಿ ಮಾಡಿದೆ.

‘‘ಗಾರ್ಡ್ಸ್‌ಮನ್ ಲಾಲ್ ಮಾದಕ ಪದಾರ್ಥದ ಬಗ್ಗೆ ಬರಾಕ್‌ಗಳಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದರು. ಗಾರ್ಡ್‌ಗಳು ಅರಮನೆಯಲ್ಲಿ ಸರಕಾರಿ ಸೇವೆ ಮಾಡುತ್ತಾರೆ. ಹಾಗಾಗಿ, ಅವರ ವರ್ತನೆ ಅವಮಾನಕಾರಿ’’ ಎಂದು ಮೂಲವೊಂದು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News