ನ್ಯಾಯಾಲಯಕ್ಕೆ ಹಾಜರಾಗಲು ಶರೀಫ್, ಪತ್ರಕರ್ತನಿಗೆ ಆದೇಶ

Update: 2018-09-25 14:27 GMT

ಇಸ್ಲಾಮಾಬಾದ್, ಸೆ. 25: ದೇಶದ್ರೋಹ ಪ್ರಕರಣವೊಂದರ ಮುಂದಿನ ವಿಚಾರಣೆಯಲ್ಲಿ ಹಾಜರಿರುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಮಾಜಿ ಪ್ರಧಾನಿ ನವಾಝ್ ಶರೀಫ್ ಮತ್ತು ಪ್ರಭಾವಿ ಪತ್ರಿಕೆ ‘ಡಾನ್’ ವರದಿಗಾರ ಸಿರಿಲ್ ಅಲ್ಮೇಡರಿಗೆ ಸೋಮವಾರ ಸೂಚಿಸಿದೆ.

‘ಡಾನ್’ಗೆ ನೀಡಿದ ಸಂದರ್ಶನವೊಂದರಲ್ಲಿ, ಶರೀಫ್ ಸರಕಾರಿ ಸಂಸ್ಥೆಗಳನ್ನು ನಿಂದಿಸಿದ್ದಾರೆ, ಹಾಗಾಗಿ, ಅವರ ವಿರುದ್ಧ ದೇಶದ್ರೋಹ ಕಾನೂನಿನಡಿ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಅಮೀನಾ ಮಲಿಕ್ ಎಂಬವರು ಲಾಹೋರ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು.

ಕಳೆದ ಮೂರು ವಿಚಾರಣೆಗಳಲ್ಲಿ ಪತ್ರಕರ್ತ ಅಲ್ಮೇಡ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗುವುದು ಎಂದು ಮೂವರು ನ್ಯಾಯಾಧೀಶರ ಪೀಠ ಪತ್ರಕರ್ತನ ವಕೀಲರನ್ನು ಎಚ್ಚರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News