ಕಿಮ್ ಜಾಂಗ್ ಜೊತೆ ಶೀಘ್ರದಲ್ಲೇ 2ನೇ ಶೃಂಗ ಸಮ್ಮೇಳನ: ಟ್ರಂಪ್

Update: 2018-09-25 14:29 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 25: ಉತ್ತರ ಕೊರಿಯ ಚೇರ್‌ಮನ್ ಕಿಮ್ ಜಾಂಗ್ ಉನ್ ಜೊತೆಗೆ ಎರಡನೇ ಶೃಂಗಸಮ್ಮೇಳನ ಶೀಘ್ರದಲ್ಲೇ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸೋಮವಾರ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಟ್ರಂಪ್, ಉತ್ತರ ಕೊರಿಯದೊಂದಿಗಿನ ಅಮೆರಿಕದ ಸಂಬಂಧ ಈಗ ಬಹಳಷ್ಟು ಸುಧಾರಿಸಿದೆ ಎಂದು ಹೇಳಿದರು.

ಕಳೆದ ವರ್ಷ ಉತ್ತರ ಕೊರಿಯದ ಕಿಮ್ ಜಾಂಗ್ ಉನ್‌ರನ್ನು ಟ್ರಂಪ್ ‘ಚಿಕ್ಕ ರಾಕೆಟ್ ಮನುಷ್ಯ’ ಎಂಬುದಾಗಿ ಕರೆದಿರುವುದನ್ನು ಸ್ಮರಿಸಬಹುದಾಗಿದೆ. ‘‘ಅದೊಂದು ಬೇರೆಯೇ ಪ್ರಪಂಚವಾಗಿತ್ತು. ಅದು ಅಪಾಯಕಾರಿ ಕಾಲವಾಗಿತ್ತು. ಈಗ ಒಂದು ವರ್ಷದ ಬಳಿಕ ಕಾಲ ತುಂಬಾ ಬದಲಾಗಿದೆ’’ ಎಂದರು.

ಎರಡನೇ ಟ್ರಂಪ್-ಕಿಮ್ ಸಭೆಯ ವಿವರಗಳನ್ನು ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ರೂಪಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದರು.

ಈ ತಿಂಗಳು ಟ್ರಂಪ್‌ಗೆ ಬರೆದ ಪತ್ರದಲ್ಲಿ, ಎರಡನೇ ಶೃಂಗ ಸಮ್ಮೇಳನವನ್ನು ಏರ್ಪಡಿಸುವ ಪ್ರಸ್ತಾಪವನ್ನು ಕಿಮ್ ಮುಂದಿಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ‘‘ನಾವು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಏರ್ಪಡಿಸುತ್ತೇವೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News