ನಿಟ್ಟೆ: ನಾಳೆ ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ

Update: 2018-09-25 14:42 GMT

ನಿಟ್ಟೆ, ಸೆ.25: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪದವಿ ಪೂರ್ವ ಕಾಲೇಜು, ಪದವಿ, ಸ್ನಾತಕೋತ್ತರ (ಇಂಜಿನಿಯರಿಂಗ್, ಬಿಕಾಂ, ಬಿಬಿಎಂ, ಬಿಎ, ಬಿಎಸ್ಸಿ, ಬಿಸಿಎ, ಎಂಕಾಂ, ಎಂಬಿಎ, ಎಂಎಸ್‌ಡಬ್ಲ್ಯು, ಎಂಸಿಎ ಹಾಗೂ ಇತರೆ) ವಿದ್ಯಾರ್ಥಿಗಳಿಗಾಗಿ ಕ್ವಿಜ್ (ರಸಪ್ರಶ್ನೆ) ಸ್ಪರ್ಧೆಯನ್ನು ಸೆ.27ರಂದು ಹಮ್ಮಿಕೊಳ್ಳಲಾಗಿದೆ.

ಪ್ರತಿ ಕಾಲೇಜಿನಿಂದ ಒಂದು ಅಥವಾ ಹೆಚ್ಚು ತಂಡಗಳು ಭಾಗವಹಿಸ ಬಹುದು. ಕೂಡಲೇ ಕಾಲೇಜಿನ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆರಂಭಿಕ ಸುತ್ತಿನ ಸ್ಪರ್ಧೆಗಳು ಇದೇ ಸೆ.27ರ ಗುರುವಾರ ನಿಟ್ಟೆಯಲ್ಲಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ನಡೆಯಲಿದೆ.

ಗ್ರಾಂಡ್ ಫೈನಲ್ ಸ್ಫರ್ಧೆಯು ಅ.2ರ ಮಂಗಳವಾರ ಮಂಗಳೂರಿನ ಫೋರಮ್ ಫಿಜ್ಹಾ ಮಾಲ್‌ನಲ್ಲಿ ನಡೆಯಲಿದೆ. ಕಾಲೇಜು ತಂಡಗಳಿಗೆ ಹೆಸರು ನೋಂದಾಯಿಸಲು ಇ-ಮೇಲ್ ವಿಳಾಸ-ettin2k18@gmail.com. ಆಸಕ್ತ ತಂಡಗಳು ಕೂಡಲೇ ಹೆಸರು ನೊಂದಾಯಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News