ಯಮನ್ ನಲ್ಲಿ ಎಲೆಗಳನ್ನು ತಿಂದು ಬದುಕುತ್ತಿರುವ ಗ್ರಾಮಸ್ಥರು !

Update: 2018-09-25 15:16 GMT

ಕೈರೋ (ಈಜಿಪ್ಟ್), ಸೆ. 25: ಉತ್ತರ ಯಮನ್‌ನ ಸಂಘರ್ಷಪೀಡಿತ ಪ್ರದೇಶವೊಂದರಲ್ಲಿ ಹಸಿದ ಗ್ರಾಮಸ್ಥರು ಎಲೆಗಳನ್ನು ತಿಂದು ಬದುಕುತ್ತಿರುವುದು ವರದಿಯಾದ ಬಳಿಕ, ವಿಶ್ವಸಂಸ್ಥೆ ಮತ್ತು ಇತರ ದಾನಿ ಸಂಸ್ಥೆಗಳು ಅಲ್ಲಿಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿವೆ.

ಪರಿಹಾರ ಸಂಸ್ಥೆಗಳ ಸಾಮರ್ಥ್ಯ ಸೀಮಿತವಾಗಿದೆ ಹಾಗೂ ಯಮನ್‌ನ ಹಸಿವಿನ ಬಿಕ್ಕಟ್ಟು ಅದನ್ನು ಮೀರಿ ಬೆಳೆಯುತ್ತಿದೆ.

ಅದೇ ವೇಳೆ, ಅಗತ್ಯವಿರುವವರಿಗೆ ನೆರವು ತಲುಪುವಂತೆ ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಅಸ್ಲಮ್ ಎಂಬ ಜಿಲ್ಲೆಯಲ್ಲಿ ಕೆಲವು ಕುಟುಂಬಗಳು ಎಲೆಗಳನ್ನು ತಿಂದು ಬದುಕುತ್ತಿರುವುದನ್ನು ಈ ತಿಂಗಳ ಆದಿಭಾಗದಲ್ಲಿ ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆ ಪತ್ತೆಹಚ್ಚಿತ್ತು. ಅಲ್ಲಿಗೆ ನೆರವು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಆದರೆ, ಅದರ ನೆರೆಯ ಜಿಲ್ಲೆ ಖಯ್ರಿನ್ ಅಲ್-ಮಹರ್ರಕ್‌ನ ಪರಿಸ್ಥಿತಿ ಅದಕ್ಕಿಂತಲೂ ಹದಗೆಟ್ಟಿರುವುದನ್ನು ನೆರವು ಸಂಸ್ಥೆಗಳು ಪತ್ತೆಹಚ್ಚಿವೆ.

ಯಮನ್‌ನಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಮತ್ತು ಸೌದಿ ಅರೇಬಿಯ ನೇತೃತ್ವದ ಅರಬ್ ಮಿತ್ರ ಪಡೆಗಳ ಬೆಂಬಲಿತ ಯಮನ್ ಸರಕಾರದ ನಡುವೆ 2015ರಿಂದ ಕಾಳಗ ನಡೆಯುತ್ತಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News