400 ವರ್ಷಗಳ ಹಿಂದೆ ಭಾರತೀಯ ಮಸಾಲೆಗಳನ್ನು ಸಾಗಿಸುತ್ತಿದ್ದಾಗ ಮುಳುಗಿದ್ದ ಹಡಗು ಪತ್ತೆ

Update: 2018-09-25 15:53 GMT

ಹೊಸದಿಲ್ಲಿ, ಸೆ.25: ಪೋರ್ಚುಗಲ್‌ನ ಕರಾವಳಿಯಲ್ಲಿ ನಾಲ್ಕು ಶತಮಾನಗಳಷ್ಟು ಹಳೆಯ ಹಡಗಿನ ಅವಶೇಷಗಳನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ. ಇದು 400 ವರ್ಷಗಳ ಹಿಂದೆ ಭಾರತದಿಂದ ಮಸಾಲೆ ಪದಾರ್ಥಗಳನ್ನು ತುಂಬಿಸಿ ಸಾಗುತ್ತಿದ್ದ ಹಡಗಾಗಿದ್ದು ಲಿಸ್ಬನ್ ಸಮೀಪ ಮುಳುಗಿರಬಹುದು ಎಂದು ವಿಶೇಷಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಂಪರೆಯ ದೃಷ್ಟಿಯಿಂದ ಇದು ದಶಮಾನದ ಅನ್ವೇಷಣೆಯಾಗಿದೆ ಎಂದು ಯೋಜನೆಯ ನಿರ್ದೇಶಕ ಜಾರ್ಜ್ ಫ್ರೆರ ತಿಳಿಸಿದ್ದಾರೆ. ಪೋರ್ಚುಗಲ್‌ನಲ್ಲಿ ಇದು ಈವರೆಗಿನ ಅತ್ಯಂತ ಮಹತ್ವದ ಶೋಧ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಡಗಿನ ಅವಶೇಷದ 12 ಮೀ. ಅಡಿಯಲ್ಲಿ ಸುತ್ತಮುತ್ತ ಮುಳುಗುತಜ್ಞರಿಗೆ ಮಸಾಲೆಗಳು, ಪೋರ್ಚುಗೀಸ್ ಬರಹಗಳುಳ್ಳ ಒಂಬತ್ತು ಪಿರಂಗಿಗಳು, ವಸಾಹತು ಯುಗದಲ್ಲಿ ಗುಲಾಮರ ವ್ಯಾಪಾರಕ್ಕೆ ಬಳಸಲಾಗುತ್ತಿದ್ದ ಕ್ರೌನಿ ಶೆಲ್ಸ್ ಎಂಬ ಕರೆನ್ಸಿ ಹಾಗೂ ಇತರ ವಸ್ತುಗಳು ದೊರಕಿವೆ ಎಂದು ಫ್ರೆರ ತಿಳಿಸಿದ್ದಾರೆ.

ಈ ಹಡಗು 1575 ಮತ್ತು 1625ರ ಮಧ್ಯೆ ಮುಳುಗಿರಬಹುದು ಎಂದು ಫ್ರೆರ ಶಂಕೆ ವ್ಯಕ್ತಪಡಿಸಿದ್ದು ಈ ಅವಧಿಯಲ್ಲಿ ಪೋರ್ಚುಗಲ್ ಮತ್ತು ಭಾರತದ ಮಧ್ಯೆ ಮಸಾಲೆ ಪದಾರ್ಥದ ವ್ಯಾಪಾರ ಉಚ್ಪ್ರಾಯ ಸ್ಥಿತಿಯಲ್ಲಿತ್ತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News