ಸೆ.27;ಯೆನೆಪೊಯ ವಿ.ವಿಯಲ್ಲಿ ಪ್ರದರ್ಶನ ಕಲೆಗಳ ಅಸ್ಥೆಟ್ ಕಲಾ ಕ್ಲಬ್ ಉದ್ಘಾಟನೆ

Update: 2018-09-25 16:17 GMT

ಮಂಗಳೂರು, ಸೆ.25:ಪ್ರದರ್ಶನ ಕಲೆಗಳ ‘ಅಸ್ಥೆಟ್’ ಕಲಾ ಕ್ಲಬ್‌ನ್ನು ದೇರಳಕಟ್ಟೆಯ ಯೆನೆಪೊಯ ವಿಶ್ವ ವಿದ್ಯಾನಿಲಯದ ದಂತ ವೈದ್ಯಕಾಲೇಜು ಸಭಾಂಗಣದಲ್ಲಿ ಸೆ.27ರಂದು 9.30 ಗಂಟೆಗೆ ಬೆಂಗಳೂರಿನ ಕಲಾವಿಮರ್ಶಕ ಹಾಗೂ ಬರಹಗಾರ ಗಿರಿಧರ್ ಖಾನಿಸ್ ಉದ್ಘಾಟನೆ ಮಾಡಲಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕಲಾ ಮಾಧ್ಯಮದ ಮೂಲಕ ಕ್ರಿಯಾಶೀಲತೆ ಹಾಗೂ ವೈಯಕ್ತಿಕ ಹಾಗೂ ಮಾನಸಿಕ ಬೆಳವಣಿಗೆ ಮತ್ತು ಸ್ವ ಸಾಮಥ್ಯವನ್ನು ಉತ್ತಮಪಡಿಸುವ ನಟ್ಟಿನಲ್ಲಿ ಕಲಾ ಮಾಧ್ಯಮ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಕಲಾ ಕ್ಲಬ್ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News