ತಲೆಮರೆಸಿಕೊಂಡ ನಿತಿನ್ ಸಂದೇಸಾರ ನೈಜೀರಿಯಾ ಇಂಟರ್‌ಪೋಲ್ ಸಂಪರ್ಕಿಸಿದ ಸಿಬಿಐ

Update: 2018-09-25 17:04 GMT

ಹೊಸದಿಲ್ಲಿ, ಸೆ. 25: ಬ್ಯಾಂಕ್‌ಗಳಿಗೆ 53,000 ಕೋಟಿ ರೂಪಾಯಿ ವಂಚನೆ ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್‌ನ ನಿತನ್ ಸಂದೇಸಾರ ಅವರು ತಮ್ಮ ದೇಶ ತ್ಯಜಿಸಿರುವ ಬಗ್ಗೆ ದೃಢಪಡಿಸುವಂತೆ ಸಿಬಿಐ ನೈಜೀರಿಯಾದ ಇಂಟರ್ ಪೋಲ್ ವಿಂಗ್‌ನಲ್ಲಿ ವಿನಂತಿಸಿದೆ. ಹಗರಣದ ಆರೋಪಿಗಳಾದ ಸಂದೇಸಾರ ಹಾಗೂ ಅವರ ಕುಟುಂಬದ ಸದಸ್ಯರು ಯುಎಇಯಿಂದ ಭಾರತದ ಗಡಿಪಾರು ಒಪ್ಪಂದ ಹೊಂದಿರದ ನೈಜಿರಿಯಾಕ್ಕೆ ಪರಾರಿಯಾಗಿದ್ದಾರೆ ಎಂಬ ವರದಿಯ ಬಳಿಕ ಸಿಬಿಐ ಈ ಕ್ರಮ ಕೈಗೊಂಡಿದೆ. ಸಂದೇಸಾರ ಹಾಗೂ ಅವರ ಕುಟುಂಬದ ಸದಸ್ಯರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಬಿಐ ತಿಳಿಸಿದೆ.

ವರದಿಯ ಹಿನ್ನೆಲೆಯಲ್ಲಿ ಸಂದೇಸಾರ ಹಾಗೂ ಅವರ ಕುಟುಂಬದ ಸದಸ್ಯರ ಮಾಹಿತಿ ತಿಳಿಯಲು ಸಿಬಿಐ ನೈಜೀರಿಯಾದ ಇಂಟರ್‌ಪೋಲ್ ಅನ್ನು ಸಂಪರ್ಕಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ಸಿಬಿಐ ಸ್ಟರ್ಲಿಂಗ್ ಬಯೋಟೆಕ್, ಅದರ ನಿರ್ದೇಶಕರಾದ ಚೇತನ್ ಜಯಂತಿಲಾಲ್ ಸಂದೇಸಾರಾ, ದೀಪ್ತಿ ಚೇತನ್ ಸಂದೇಸಾರ, ರಾಜಭೂಷಣ್ ಓಂಪ್ರಕಾಶ್ ದೀಕ್ಸಿತ್, ನಿತಿನ್ ಜಯಂತಿಲಾಲ್ ಸಂದೇಸಾರ, ವಿಲಾಸ್ ಜೋಷಿ, ಚಾರ್ಟರ್ಡ್ ಅಕೌಂಟೆಂಟ್ ಹೇಮಂತ್ ಹಾಥಿ, ಆಂಧ್ರ ಬ್ಯಾಂಕ್ ಸಮೂಹದ ಮಾಜಿ ನಿರ್ದೇಶಕ ಅನೂಪ್ ಗರ್ಗ್ ಹಾಗೂ ಇತರ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಆಂಧ್ರ ಬ್ಯಾಂಕ್ ನೇತೃತ್ವದ ಒಕ್ಕೂಟದಿಂದ ಕಂಪೆನಿ 5000 ಕೋ. ರೂ. ಸಾಲ ಪಡೆದುಕೊಂಡಿತ್ತು. ಅದು ಈಗ ಅನುತ್ಪಾದಕ ಆಸ್ತಿಯಾಗಿ ಪರಿವರ್ತನೆಯಾಗಿದೆ ಎಂದು ಸಿಬಿಐ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News