ಮಕ್ಕಳನ್ನು ಸಚ್ಚಾರಿತ್ರ್ಯವಂತರನ್ನಾಗಿ ಬೆಳೆಸುವಲ್ಲಿ ಹೆತ್ತವರ ಪಾತ್ರ ಮಹತ್ವದ್ದು : ರಝಾಕ್ ಮಾಸ್ಟರ್.

Update: 2018-09-25 17:37 GMT

ವಿಟ್ಲ,ಸೆ.25:  ಮಕ್ಕಳನ್ನು ನೈತಿಕವಾಗಿ ಸಚ್ಚಾರಿತ್ರ್ಯವಂತರನ್ನಾಗಿ ಬೆಳೆಸುವಲ್ಲಿ ಹೆತ್ತವರ ಪ್ರಮುಖವಾಗಿದೆ. ನೈತಿಕ ಪರಿಧಿಯ ಮೇರೆ ಮೀರದಂತೆ ಬಾಲ್ಯದಲ್ಲಿಯೇ ಮಾರ್ಗದರ್ಶನ ನೀಡಬೇಕು. ಅದು ಶಾಲಾ ಕಾಲೇಜು ಮದ್ರಸಗಳಿಂದ ಮಾತ್ರ ಬರುವಂತಹದ್ದಲ್ಲ ಮಕ್ಕಳನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಸಶಕ್ತರನ್ನಾಗಿ ಮಾಡಬೇಕು. ಮೊಬೈಲ್ ಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸಬೇಕು. ಬಹಳ ವ್ಯವಸ್ಥಿತವಾಗಿ ಯೋಜನಾ ಬದ್ಧವಾಗಿ ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರು ತಮ್ಮ ಜವಾಬ್ದಾರಿಕೆಯನ್ನು ನಿಭಾಯಿಸಬೇಕು ಎಂದು ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜು  ಉಪನ್ಯಾಸಕರಾದ ಅಬ್ದುರ್ರಝಾಕ್ ಅನಂತಾಡಿ ಹೇಳಿದರು.

 ಅವರು ಇಲ್ಲಿನ ಇಸ್ಲಾಮಿಯಾ ಮದ್ರಸದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ "ಮಕ್ಕಳ ಶಿಕ್ಷಣದಲ್ಲಿ ಮನೆಮಂದಿಯ ಪಾತ್ರ" ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

 ಪಾಣೆಮಂಗಳೂರು ಅಲ್ ಹಸನಾತ್ ಮಸೀದಿಯ ಇಮಾಮರಾದ ಮುಹಮ್ಮದ್  ನೀರಾಡ್ ಮೌಲವಿ ಅಧ್ಯಕ್ಷತೆ ವಹಿಸಿದ್ದರು. ಮದ್ರಸತುಲ್ ಇಸ್ಲಾಮಿಯಾದ ಸಂಚಾಲಕ ಇಬ್ರಾಹಿಂ ಚೆಂಡಾಡಿ ಉಪಸ್ಥಿತರಿದ್ದರು.

ಇದೇ ವೇಳೆ ಬೋರ್ಡ್ ಆಫ್ ಇಸ್ಲಾಮಿಕ್ ಪರೀಕ್ಷೆಯ ಕಾಲೇಜು ವಿಭಾಗದ ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ಮುಹಮ್ಮದ್ ಸಲ್ವಾನ್ ರನ್ನು ಪುರಸ್ಕರಿಸಲಾಯಿತು, ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು ಹಾಗೂ ಹೆಚ್. ಆರ್.ಡಿ ಸ್ಕಾಲರ್ ಶಿಪ್ ಗೆ  ಆಯ್ಕೆಯಾದ ಆಯಿಶಾ ಶೈಮಾರನ್ನು ಗೌರವಿಸಲಾಯಿತು.

 ಜಮಾಅತೇ ಇಸ್ಲಾಂ ಸ್ಥಾನೀಯ ಸಂಚಾಲಕ ಮುಖ್ತಾರ್ ಅಹ್ಮದ್ ಸ್ವಾಗತಿಸಿ, ವಂದಿಸಿದರು. ಸಲೀಮ್ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News