ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಮಾಹಿತಿ-ಜಾಗೃತಿ ಶಿಬಿರ

Update: 2018-09-25 18:37 GMT

ಬಂಟ್ವಾಳ, ಸೆ. 25: ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಉದ್ಯೋಗ ಭರವಸೆ ಕೋಶದ ವತಿಯಿಂದ ಸಿಡಾಕ್ ಸಂಸ್ಥೆಯ ಮೂಲಕ ದಿಶಾ ತರಬೇತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಮಾಹಿತಿ ಹಾಗೂ ಜಾಗೃತಿ ಶಿಬಿರ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ವಿನಾಯಕ ಪ್ರಭು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿನಾಯಕ ಪ್ರಭು ಅವರು ಉದ್ಯೋಗಪತಿಗಳು ನೇಮಿಸಿಕೊಳ್ಳುವ ಸಿಬ್ಬಂದಿಗಳಲ್ಲಿ ಇರಬೇಕಾದ ಕೌಶಲ್ಯಗಳ ಬಗ್ಗೆ ಮಾಹಿತಿ, ಸಂದರ್ಶನಗಳನ್ನು ಎದುರಿಸುವ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸತೀಶ್ ಅವರು, ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸರಕಾರ ನೀಡುವಂತಹ ಸೌಲಭ್ಯಗಳ ಮಾಹಿತಿ, ಸಾಲ ಸೌಲಭ್ಯವನ್ನು ಒದಗಿಸುವಂತಹ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. 

ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಸೌಮ್ಯ ಎಚ್.ಕೆ ಉಪಸ್ಥಿತರಿದ್ದರು. 

ಉದ್ಯೋಗ ಭರವಸೆ ಕೋಶದ ಸಂಚಾಲಕ ಹನುಮಂತಯ್ಯ ಜಿ.ಎಚ್ ಸ್ವಾಗತಿಸಿದರು. ಎಸ್ ಸಹಾಯಕ ಪ್ರಾಧ್ಯಾಪಕ ವಿನಯ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News