ಮಹಿಳಾ ಪೈಲಟ್‌ಗಳು ನಾಲ್ಕು ವರ್ಷದಲ್ಲಿ ದುಪ್ಪಟ್ಟು

Update: 2018-09-26 04:02 GMT

ಹೊಸದಿಲ್ಲಿ, ಸೆ.26: "ನೋಡಿ ಮಿಸ್ಟರ್ ಟ್ರಂಪ್, ನಮ್ಮೆಲ್ಲ ಮಹಿಳೆಯರು ನಿಮ್ಮತ್ತ ಮುಖ ಮಾಡಿದ್ದಾರೆ!" ಎಂಬ ಸಂದೇಶ ಏರ್‌ ಇಂಡಿಯಾ ಪೈಲಟ್‌ಗಳ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಕೆಲ ತಿಂಗಳ ಹಿಂದೆ ವೈರಲ್ ಆಗಿತ್ತು. ಏರ್‌ಲೈನ್ಸ್ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅಮೆರಿಕಕ್ಕೆ ಎಲ್ಲ ಮಹಿಳಾ ಸಿಬ್ಬಂದಿ ಇದ್ದ ಮೊಟ್ಟಮೊದಲ ವಿಮಾನ ಕಳುಹಿಸಿದ ಸಂದರ್ಭ ಅದು.

ದೆಹಲಿ- ನ್ಯೂಯಾರ್ಕ್, ಚಿಕಾಗೋ, ಸ್ಯಾನ್‌ಫ್ರಾನ್ಸಿಸ್ಕೊ, ಮುಂಬೈ- ನೆವಾರ್ಕ್, ಸ್ಯಾನ್ಸ್‌ಫ್ರಾನ್ಸಿಸ್ಕೊ- ದೆಹಲಿ ನೇರ ವಿಮಾನ ಹೀಗೆ ಅಮೆರಿಕಕ್ಕೆ ಹೊರಟಿದ್ದ ಹಾಗೂ ಅಮೆರಿಕದಿಂದ ಭಾರತಕ್ಕೆ ಬರುವ ಏರ್‌ ಇಂಡಿಯಾ ವಿಮಾನಗಳಲ್ಲಿ ಒಂದೇ ದಿನ 29 ಮಹಿಳಾ ಪೈಲಟ್‌ಗಳನ್ನು ನಿಯೋಜಿಸಲಾಗಿತ್ತು. ಆಗ ಒಟ್ಟು ಪೈಲಟ್ ಬಲದ ಶೇಕಡ 12.8ರಷ್ಟು ಅಂದರೆ 280 ಮಹಿಳಾ ಪೈಲಟ್‌ಗಳು ಕಾರ್ಯನಿರ್ವಹಿಸುತ್ತಿದ್ದರು.

ಇದೀಗ ಏರ್‌ಇಂಡಿಯಾದ ಒಟ್ಟು 8,797 ಪೈಲಟ್‌ಗಳ ಪೈಕಿ 1,092 ಮಂದಿ ಅಂದರೆ 12.4% ಮಹಿಳಾ ಪೈಲಟ್‌ಗಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ ದುಪ್ಪಟ್ಟಾಗಿದೆ. 2014ರಲ್ಲಿ 5,050 ಪೈಲಟ್‌ಗಳ ಪೈಕಿ 586 ಮಂದಿ ಮಹಿಳೆಯರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News