ಜಿಲ್ಲಾ ಮಟ್ಟದ ಕ್ರೀಡಾಕೂಟ: ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕ ಆಯ್ಕೆ

Update: 2018-09-26 08:16 GMT

ಭಟ್ಕಳ, ಸೆ.26: ಯಲ್ಲಾಪುರ ತಾಲೂಕು ಕ್ರಿಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ದಿ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ವಿದ್ಯಾರ್ಥಿಗಳಾದ ರಕ್ಷಿತ ಡಿ. ನಾಯ್ಕ ಯೋಗದಲ್ಲಿ ಪ್ರಥಮ, ಲೋಕೇಶ ನಾಯ್ಕ ಕಬಡ್ಡಿಯಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ದ್ವಿತೀಯ, ಟ್ರಿಪಲ್ ಜಂಪ್‌ನಲ್ಲಿ ದ್ವಿತೀಯ, ಮಹೇಶ ನಾಯ್ಕ ಕಬಡ್ಡಿಯಲ್ಲಿ ಪ್ರಥಮ, ಸುದೀಪ ನಾಯ್ಕ 110 ಮೀ. ಅಡೆತಡೆ ಓಟದಲ್ಲಿ ಪ್ರಥಮ, ಚರಣ ನಾಯ್ಕ 110 ಮೀ. ಅಡೆತಡೆ ಓಟದಲ್ಲಿ ದ್ವಿತೀಯ, ನಿತಿನ್ ನಾಯ್ಕ ಕರಾಟೆಯಲ್ಲಿ ದ್ವಿತೀಯ ಮತ್ತು ಜಾನಕಿ ಗೊಂಡ ಎತ್ತರ ಜಿಗಿತದಲ್ಲಿ ದ್ವಿತೀಯ ಬಹುಮಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News