ರಫೇಲ್ ಒಪ್ಪಂದಕ್ಕೆ ಸಹಿ ಹಾಕಿದಾಗ ನಾನು ಅಧಿಕಾರದಲ್ಲಿರಲಿಲ್ಲ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್

Update: 2018-09-26 09:38 GMT

ನ್ಯೂಯಾರ್ಕ್, ಸೆ.26: ಭಾರತದಲ್ಲಿ ವಿವಾದದ ಭಾರೀ ಧೂಳೆಬ್ಬಿಸಿರುವ ರಫೇಲ್ ಒಪ್ಪಂದದ ಬಗ್ಗೆ ನೇರ ಉತ್ತರ ನೀಡುವುದನ್ನು ತಪ್ಪಿಸಿಕೊಂಡ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ 36 ಯುದ್ಧ ವಿಮಾನ ಖರೀದಿಯ ಈ ಬಹುಕೋಟಿ ಡಾಲರ್ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಅಂಕಿತ ಹಾಕುವಾಗ ತಾನು ಅಧಿಕಾರದಲ್ಲಿರಲಿಲ್ಲ ಎಂದಷ್ಟೇ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಶೃಂಗಸಭೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ, ಭಾರತ ಸರಕಾರವು ಫ್ರೆಂಚ್ ಸರಕಾರ ಅಥವಾ ರಫೇಲ್ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಗೆ ಮಾಜಿ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿದಂತೆ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಹೆಸರು ಸೂಚಿಸಿತ್ತೇ ಎಂಬ ಪ್ರಶ್ನೆಗೆ ಉತ್ತರ ನೀಡುವ ವೇಳೆ ಆರೋಪವನ್ನು ಮ್ಯಾಕ್ರೋನ್ ನೇರವಾಗಿ ನಿರಾಕರಿಸದೇ ಇದ್ದರೂ ‘‘ನಾನು ಆ ಸಂದರ್ಭ ಅಧಿಕಾರದಲ್ಲಿರಲಿಲ್ಲ, ನಮ್ಮಲ್ಲಿ ಸ್ಪಷ್ಟ ನಿಯಮಗಳಿವೆ. ಇದು ಸರಕಾರ ಮಟ್ಟದಲ್ಲಿ ನಡೆದ ಮಾತುಕತೆ. ಇದು ಭಾರತ ಮತ್ರು ಫ್ರಾನ್ಸ್ ನಡುವೆ ಮಿಲಿಟರಿ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮೈತ್ರಿ’’ ಎಂದರು.

‘‘ಪ್ರಧಾನಿ ಮೋದಿ ಕೆಲ ದಿನಗಳ ಹಿಂದೆ ಏನು ಹೇಳಿದ್ದರೆಂಬುದನ್ನು ನಾನು ಉಲ್ಲೇಖಿಸ ಬಯಸುತ್ತೇನೆ’’ ಎಂದಷ್ಟೇ ಅವರು ಹೇಳಿದರು.
ಕಳೆದ ವರ್ಷದ ಮೇ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷರಾಗಿ ಮೆಕ್ರಾನ್ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News