‘ಮೇಲ್ತೆನೆ’ ಆನ್‌ಲೈನ್ ಬ್ಯಾರಿ ಅನುವಾದ ಸ್ಪರ್ಧೆಯ ಫಲಿತಾಂಶ ಪ್ರಕಟ

Update: 2018-09-26 10:49 GMT

ಮಂಗಳೂರು, ಸೆ.26: ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ ‘ಮೇಲ್ತೆನೆ’ಯು ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಬ್ಯಾರಿ ಅನುವಾದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಕೆ.ವೈ.ಹಮೀದ್ ಕುಕ್ಕಾಜೆ (ಪ್ರಥಮ), ಶಿಹಾಬ್ ಉಪ್ಪಿನಂಗಡಿ (ದ್ವಿತೀಯ), ಝುಲೇಖಾ ಮುಮ್ತಾಝ್ (ತೃತೀಯ) ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಅದಲ್ಲದೆ, ಎ.ಕೆ.ನಂದಾವರ, ರಶೀದಾ ಮನೇಲ್, ಸಮ್ಮಿ ಪಾಣೇಲ, ಬಿ.ಎಂ.ಹಾರಿಸ್ ಬಾಂಬಿಲ, ತಾಜ್ ಪುತ್ತೂರು, ಸುಮಯ್ಯಿ ಪರ್ವೀನ್, ಉಮ್ಮು ಸುಹೈಮಾ, ನಿಝಾಮ್ ಗೋಳಿಪಡ್ಪು, ಅನ್ಸಾಫ್ ಸಿಲಿಕೋನಿಯಾ, ರಹೀನಾ ತೊಕ್ಕೊಟ್ಟು ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಸ್ಪರ್ಧೆಗೆ ಒಟ್ಟು 70 ಅನುವಾದಿತ ಕಥೆಗಳು ಬಂದಿದ್ದವು. ಆ ಪೈಕಿ ನಿಯಮಾವಳಿಯಂತೆ 41 ಕಥೆಗಳನ್ನು ಪರಿಗಣಿಸಲಾಗಿತ್ತು. ನಾಲ್ವರು ತೀರ್ಪುಗಾರರು ನೀಡಿದ ಅಂಕಗಳ ಆಧಾರದ ಮೇಲೆ ತೀರ್ಪು ಪ್ರಕಟಿಸಲಾಗಿದೆ. ಅಲ್ಲದೆ ಬ್ಯಾರಿ ಭಾಷೆಯ ವಿವಿಧ ಪ್ರಭೇದಗಳನ್ನು ಈ ಸ್ಪರ್ಧೆಯಲ್ಲಿ ಪರಿಗಣಿಸಲಾಗಿದೆ. ಅಕ್ಟೋಬರ್ 7ರಂದು ಬೆಳಗ್ಗೆ ದೇರಳಕಟ್ಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News