ಸುರತ್ಕಲ್ ಟೋಲ್‌ಗೇಟ್ ಮುಚ್ಚದಿದ್ದರೆ ಅನಿರ್ದಿಷ್ಟಾವಧಿ ಧರಣಿ: ಹೋರಾಟ ಸಮಿತಿ ಎಚ್ಚರಿಕೆ

Update: 2018-09-26 12:47 GMT

ಮಂಗಳೂರು, ಸೆ. 26: ತಿಂಗಳೊಳಗೆ ಸುರತ್ಕಲ್ ಸಮೀಪದ ಎನ್‌ಐಟಿಕೆ ಬಳಿಯ ಟೋಲ್‌ಗೇಟ್ ಮುಚ್ಚದಿದ್ದರೆ ಸುರತ್ಕಲ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಸುರತ್ಕಲ್ ಟೋಲ್‌ಗೇಟ್ ಮುಚ್ಚಬೇಕು ಮತ್ತು ನಂತೂರು-ಸುರತ್ಕಲ್ ಹೆದ್ದಾರಿಯನ್ನು ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿ ಸುರತ್ಕಲ್‌ನ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬುಧವಾರ ಕೂಳೂರಿನಿಂದ ಸುರತ್ಕಲ್‌ವರೆಗೆ ನಡೆದ ಯಶಸ್ವಿ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

ಇದು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ನಡೆಸಿದ ಯಾತ್ರೆಯಲ್ಲ. ಜನರ ಹಿತಕ್ಕಾಗಿ ಪಕ್ಷಾತೀತವಾಗಿ ನಡೆದ ಹೋರಾಟವಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕು. ಆ ಮೂಲಕ ಹೆದ್ದಾರಿ ದುರಸ್ತಿಗೊಳಿಸಬೇಕು ಎಂದು ನಿಯಮಬಾಹಿರವಾಗಿ ನಿರ್ಮಿಸಲಾದ ಎನ್‌ಐಟಿಕೆ ಟೋಲ್‌ಗೇಟನ್ನು ತೆರವುಗೊಳಿಸಬೇಕು ಎಂದು ಮುನೀರ್ ಕಾಟಿಪಳ್ಳ ನಲ್ಲಿ ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿಯು ಹೊಂಡಮಯವಾಗಿದೆ. ಅದರ ವಿರುದ್ಧ ಮಾತನಾಡಿದ ತಕ್ಷಣ ಸಂಸದರು ಅಧಿಕಾರಿಗಳ ಸಭೆ ಕರೆಯುತ್ತಾರೆ. ಕೆಲವೊಂದು ಆಶ್ವಾಸನೆ ನೀಡಿ ಜನರನ್ನು ಮೋಸಗೊಳಿಸುತ್ತಾರೆ. ಹೆದ್ದಾರಿ ಕುರಿತಂತೆ ನೀಡುವ ಹೇಳಿಕೆಗೂ ಅಧಿಕಾರಿಗಳ ಹೇಳಿಕೆಗೂ ವ್ಯತ್ಯಾಸವಿದೆ. ಆ ಮೂಲಕ ಅಧಿಕಾರಿಗಳ ಮೇಲೆ ನಳಿನ್‌ಗೆ ಹಿಡಿತವಿಲ್ಲ ಅಥವಾ ಅವರು ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಅಸಮರ್ಥರಾಗಿದ್ದಾರೆ ಎಂದು ನಾಗರಿಕರು ಭಾವಿಸುವಂತಾಗಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಶಾಸಕ ಭರತ್ ಶೆಟ್ಟಿ ಈ ಬಗ್ಗೆ ಮೌನ ಮುರಿಯಬೇಕು. ಜನತೆಗೆ ಅನ್ಯಾಯ ಆಗುತ್ತಿದ್ದರೂ ಕೂಡ ಧ್ವನಿ ಎತ್ತದಿರುವುದು ವಿಪರ್ಯಾಸ. ಹಾಗಾಗಿ ಅವರು ಈ ಬಗ್ಗೆ ಮಾತನಾಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮನಪಾ ಸದಸ್ಯರಾದ ದಯಾನಂದ ಶೆಟ್ಟಿ, ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ, ಬಶೀರ್ ಅಹ್ಮದ್, ಪ್ರತಿಭಾ ಕುಳಾಯಿ, ಟಿ.ಎನ್. ರಾಘವೇಂದ್ರ, ಮಾಜಿ ಮೇಯರ್ ಹಿಲ್ಡಾ ಆಳ್ವ, ಜೋಕಟ್ಟೆ ಗ್ರಾಪಂ ಅಧ್ಯಕ್ಷೆ ಪ್ರೆಸಿಲ್ಲಾ ಮೊಂತೆರೊ, ಬಿ.ಕೆ. ಇಮ್ತಿಯಾಝ್, ಸುನೀಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಯಾದವ ಶೆಟ್ಟಿ, ಪಡ್ರೆ ರಾಜೇಶ್ ಶೆಟ್ಟಿ, ಮೂಸಬ್ಬ ಪಕ್ಷಿಕೆರೆ, ಶ್ರೀನಾಥ್ ಕುಲಾಲ್, ಅಯ್ಯೂಬ್ ಕೂಳೂರು, ದಿನೇಶ್ ಕುಂಪಲ, ರಹೀಂ ಪಕ್ಷಿಕೆರೆ, ಅಬೂಬಕ್ಕರ್ ಬಾವಾ, ಬಿ.ಎಸ್. ಬಶೀರ್ ಜೋಕಟ್ಟೆ, ರಶೀದ್ ಮುಕ್ಕ, ನವೀನ್ ಕೊಂಚಾಡಿ, ಮನೋಜ್ ಉರ್ವ, ಮಹಾಬಲ ದೆಪ್ಪಲಿಮಾರ್, ನಾಸಿರ್ ಕೃಷ್ಣಾಪುರ, ಅಶ್ರಫ್ ಸಫಾ, ಸಲೀಂ ಕಾಟಿಪಳ್ಳ, ಹುಸೈನ್ ಕಾಟಿಪಳ್ಳ, ಸಂತೋಷ್ ಕುಮಾರ್ ಹೆಗ್ಡೆ ಕಿನ್ನಿಗೋಳಿ, ದುರ್ಗಾಪ್ರಸಾದ್ ಹೆಗ್ಡೆ ಕಿನ್ನಿಗೋಳಿ, ಶ್ರೀಕಾಂತ್ ಸಾಲ್ಯಾನ್, ಭರತ್ ಶೆಟ್ಟಿ ಕುಳಾಯಿ, ಗಂಗಾಧರ ಹೊಸಬೆಟ್ಟು, ಗಂಗಾಧರ ಬಂಜನ್, ಕ್ಲವರ್ ಡಿಸೋಜ ಕೂಳೂರು, ಜಾನ್ ಕೂಳೂರು, ಗಿರಿಧರ್ ಸನಿಲ್, ಪುನೀತ್ ಶೆಟ್ಟಿ, ಸುದತ್ ಜೈನ್ ಹಾಗೂ ಸುರತ್ಕಲ್ ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘ, ಕಿನ್ನಿಗೋಳಿ ವಲಯ ಲಾರಿ ಮಾಲಕರ ಸಂಘ, ತ್ರಿಚಕ್ರ ಟೆಂಪೊ ಚಾಲಕರ ಮಾಲಕರ ಸಂಘ ಸುರತ್ಕಲ್, ಗೂಡ್ಸ್ ಟೆಂಪೊ ಚಾಲಕರ ಸಂಘ ಸುರತ್ಕಲ್, ಸುರತ್ಕಲ್ ಆಟೋ ಚಾಲಕರ ಯೂನಿಯನ್, ಆನ್‌ಲೈನ್ ಟ್ಯಾಕ್ಸಿ ಓನರ್ಸ್ ಅಸೋಸಿಯೇಶನ್, ನಾಗರಿಕ ಸಮಿತಿ ಕುಳಾಯಿ, ಗೋಪಾಲಕೃಷ್ಣ ಭಜನಾ ಮಂದಿರ ಉರುಂದಾಡಿ, ನ್ಯೂ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ, ಟ್ರಾನ್ಸ್‌ಫೋರ್ಟ್ ವರ್ಕರ್ಸ್ ಯೂನಿಯನ್ ಸುರತ್ಕಲ್, ಜಯ ಕರ್ನಾಟಕ ಸುರತ್ಕಲ್, ಡಿವೈಎಫ್‌ಐ ಸುರತ್ಕಲ್ ವಲಯ ಸಹಿತ ಹಲವು ಸಂಘಟನೆಗಳ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News