ಅಖಿಲ ಭಾರತ ಕೊಂಕಣಿ ಕವಿತಾ ವಾಚನ ಸ್ಪರ್ಧೆ

Update: 2018-09-26 12:52 GMT

ಮಂಗಳೂರು, ಸೆ. 26: ಕವಿತಾ ಟ್ರಸ್ಟ್ ಅಖಿಲ ಭಾರತ ಕೊಂಕಣಿ ಕವಿತಾ ವಾಚನ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಪ್ರಾಥಮಿಕ ಹಂತವು ನಾಲ್ಕು ರಾಜ್ಯಗಳ ಹದಿನೇಳು ಸ್ಥಳಗಳಲ್ಲಿ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 2019ರ ಜನವರಿ 13ರಂದು ಮಂಗಳೂರಿನಲ್ಲಿ ನಡೆಯಲಿರುವ ಕವಿತಾ ಫೆಸ್ತ್ ಸಂದರ್ಭ ಅಂತಿಮ ಹಂತದಲ್ಲಿ ಭಾಗವಹಿಸುವ ಅವಕಾಶ ಲಭಿಸಲಿದೆ. ಪ್ರಾಥಮಿಕ ಹಂತದ ಪ್ರತಿಯೊಬ್ಬ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ದೊರಕಲಿದ್ದು, ಅಂತಿಮ ಹಂತದಲ್ಲಿ ಭಾಗವಹಿಸುವವರ ಪ್ರಯಾಣ, ವಸತಿ, ಊಟದ ವ್ಯವಸ್ಥೆಯನ್ನು ಕವಿತಾ ಟ್ರಸ್ಟ್ ಮಾಡಲಿದೆ. ಜೊತೆಗೆ ಗೆದ್ದವರಿಗೆ ನಗದು ಬಹುಮಾನಗಳು, ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳು ಲಭಿಸಲಿವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News