ಸೆ. 29: ಅಂತರ ವೈದ್ಯಕೀಯ ಕಾಲೇಜು ರಸಪ್ರಶ್ನೆ ‘ಮೆಡಿಕ್ವಿಜ್-18’

Update: 2018-09-26 14:12 GMT

ಮಂಗಳೂರು, ಸೆ.26: ನಗರದ ಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಪದವಿ ಪೂರ್ವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ 7ನೇ ವಾರ್ಷಿಕ ಜಿಲ್ಲಾ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ‘ಮೆಡಿಕ್ವಿಜ್ 2018’ ಸ್ಪರ್ಧಾಕೂಟವನ್ನು ಸೆ. 29ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು ತಮ್ಮ ಕಾಲೇಜಿನ 2 ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ತಂಡದ ಹೆಸರುಗಳನ್ನು ಸ್ಪರ್ಧಾಕೂಟದಲ್ಲಿ ಭಾಗವಹಿಸಲು ನೋಂದಾಯಿಸಬಹುದು. ಈ ಸ್ಪರ್ಧಾಕೂಟವು ಕೇವಲ ವೈದ್ಯಕೀಯ ಶಿಕ್ಷಣ ವಿಷಯ ಮತ್ತು ಶಾಸ್ತ್ರದ ಬಗ್ಗೆ ಸೀಮಿತ ಗೊಂಡಿದೆ. ಲಕ್ಷ್ಮೀ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಆಕರ್ಷಕ ಪ್ರಶಸ್ತಿ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಿದ್ದಾರೆ.

ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಪ್ರಶಾಂತ್ ಮಾರ್ಲ ಮತ್ತು ಪ್ರಾಂಶುಪಾಲ ಡಾ.ಅಶೋಕ್ ಹೆಗ್ಡೆ ಗೌರವ ಅತಿಥಿಯಾಗಿ ಪಾಲ್ಗೊಳಲಿದ್ದಾರೆ. ಹೆಚ್ಚಿನ ಮಾಹಿತಿ/ವಿವರಗಳಿಗಾಗಿ ಸ್ಪರ್ಧಾ ಕೂಟದ ಸಂಘಟಕ ಡಾ. ದೇವದಾಸ್ ರೈ (98450 81145) ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News