ಕೌಶಲ್ಯವಿಲ್ಲದ ವ್ಯಕ್ತಿಗೆ 30,000 ಕೋ.ರೂ. ನೀಡಿರುವ ಸರಕಾರ: ರಾಹುಲ್ ಗಾಂಧಿ

Update: 2018-09-26 14:52 GMT

ಹೊಸದಿಲ್ಲಿ,ಸೆ.26: ಸರಕಾರದ ಮುಂಚೂಣಿಯ ಕಾರ್ಯಕ್ರಮ ‘ಸ್ಕಿಲ್ ಇಂಡಿಯಾ’ವನ್ನು ‘ಕಿಲ್ ಇಂಡಿಯಾ’ ಎಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,ರಫೇಲ್ ಒಪ್ಪಂದದಲ್ಲಿ ಎಚ್‌ಎಎಲ್‌ನಿಂದ 30,000 ಕೋ.ರೂ.ಗಳನ್ನು ‘ಕದ್ದು’ವಿಮಾನ ತಯಾರಿಕೆಯ ಕೌಶಲ್ಯವಿಲ್ಲದ ವ್ಯಕ್ತಿಗೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿಯ ಕೌಶಲ್ಯ ಹೊಂದಿರುವ ಯುವಜನರು ಕಳೆದ 20 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ನಿರುದ್ಯೋಗ ದರದ ಸಮಸ್ಯೆಯನ್ನೆದುರಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಈ ಬಗ್ಗೆ ಬುಧವಾರ ಟ್ವೀಟಿಸಿರುವ ಅವರು,ಭಾರತದಲ್ಲಿ ಹಾಲಿ ನಿರುದ್ಯೋಗ ದರವು ಕಳೆದ 20 ವರ್ಷಗಳಲ್ಲಿಯೇ ಅಧಿಕವಾಗಿದೆ ಎಂದು ಹೇಳಿರುವ ಮಾಧ್ಯಮ ವರದಿಯನ್ನು ಜೊತೆಗೆ ಲಗತ್ತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News