ಗಡಿ ಮೂಲಸೌಕರ್ಯ ಮತ್ತು ನಿರ್ವಹಣೆಗಾಗಿ 8,606 ಕೋ.ರೂ.ಪ್ರಸ್ತಾವಕ್ಕೆ ಕೇಂದ್ರದ ಸಮ್ಮತಿ

Update: 2018-09-26 14:54 GMT

ಹೊಸದಿಲ್ಲಿ,ಸೆ.26: ಗಡಿಪ್ರದೇಶಗಳಲ್ಲಿ ವಾಸವಿರುವವರ ವಿಶೇಷ ಅಗತ್ಯಗಳನ್ನು ಪೂರೈಸಲು ಗಡಿ ಮೂಲಸೌಕರ್ಯ ಮತ್ತು ನಿರ್ವಹಣೆಯ ಸಮಗ್ರ ಯೋಜನೆಯಡಿ ಜಾರಿಗೊಳಿಸಲಾಗುತ್ತಿರುವ 60 ಯೋಜನೆಗಳಿಗೆ 8,606 ಕೋ.ರೂ.ಗಳನ್ನು ಒದಗಿಸುವ ಪ್ರಸ್ತಾವಕ್ಕೆ ಕೇಂದ್ರವು ಬುಧವಾರ ಒಪ್ಪಿಗೆಯನ್ನು ಸೂಚಿಸಿದೆ.

 ಪಾಕಿಸ್ತಾನ,ಚೀನಾ,ನೇಪಾಳ,ಭೂತಾನ್,ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಗಳೊಡನೆ ಅಂತರರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿರುವ 17 ರಾಜ್ಯಗಳಲ್ಲಿ ಈ ಯೋಜನೆಗಳನ್ನು ಅನುಷ್ಠಾನಿಸಲಾಗುತ್ತಿದೆ.

ಅಂತರರಾಷ್ಟ್ರೀಯ ಗಡಿಯಿಂದ 50 ಕಿ.ಮೀ.ಅಂತರದೊಳಗೆ ವಾಸವಿರುವ ಜನರ ಮೇಲೆ ಗಮನವನ್ನು ಕೇಂದ್ರೀಕರಿಸಿ ಗಡಿನಿವಾಸಿಗಳ ವಿಶೇಷ ಅಗತ್ಯಗಳನ್ನು ಈಡೇರಿಸಲು 111 ಗಡಿ ಜಿಲ್ಲೆಗಳಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದು ಗೃಹಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.

ರಸ್ತೆಗಳು,ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ, ಗ್ರಾಮೀಣ ಮತ್ತು ಗಡಿ ಪ್ರವಾಸೋದ್ಯಮ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ,ಸ್ವಚ್ಛತಾ ಅಭಿಯಾನ,ಪಾರಂಪರಿಕ ಸ್ಥಳಗಳ ರಕ್ಷಣೆ,ಕುಡಿಯುವ ನೀರಿನ ಪೂರೈಕೆ,ಸಮುದಾಯ ಕೇಂದ್ರಗಳು,ಸಂಪರ್ಕ ಸೌಲಭ್ಯ,ಒಳಚರಂಡಿ,ರಸ್ತೆ ಸಂಪರ್ಕಗಳಿಲ್ಲದ ದುರ್ಗಮ ಪ್ರದೇಶಗಳಲ್ಲಿ ಹೆಲಿಪ್ಯಾಡ್‌ಗಳ ನಿರ್ಮಾಣ,ರೈತರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳ ಸ್ಥಾಪನೆ ಇತ್ಯಾದಿಗಳು ಈ ಯೋಜನೆಯಲ್ಲಿ ಒಳಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News