×
Ad

ಸೆ. 30: ಬ್ಯಾರೀಸ್ ವಿದ್ಯಾಸಂಸ್ಥೆಯಿಂದ 'ಗ್ರೀನ್ ವಾಕಥಾನ್ 2018'

Update: 2018-09-26 21:22 IST

ಮಂಗಳೂರು, ಸೆ. 26: ಬ್ಯಾರೀಸ್ ತಾಂತ್ರಿಕ ಸಂಸ್ಥೆ 'ಬಿಐಟಿ' ಮತ್ತು ಬ್ಯಾರೀಸ್ ಎನ್ವೈರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ಬೀಡ್ಸ್ ವತಿಯಿಂದ ಸೆ.30ರಂದು ಮಂಗಳೂರಿನಲ್ಲಿ 'ಗ್ರೀನ್ ವಾಕಥಾನ್ 2018' ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಮರ್ಥನೀಯ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ, ಮರುನಿರ್ಮಾಣ, ಪರಿಸರದ ಮೇಲಾಗುವ ಪರಿಣಾಮ ವನ್ನು ಕಡಿಮೆಗೊಳಿಸುವುದು, ಕಟ್ಟಡ ವಾಸಿಗಳ ಆರೋಗ್ಯ ಮತ್ತು ಉತ್ಪಾದಕತೆಯನ್ನು ಹೆಚ್ಚುಗೊಳಿಸುವುದು ಮತ್ತು ಮಂಗಳೂರಿಗರಲ್ಲಿ ಸ್ವಚ್ಛ ಮತ್ತು ಹಸಿರು ನಗರದ ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಮಂಗಳೂರು ನಗರ ಮತ್ತು ಸುತ್ತಮುಲ ಶಾಲೆಗಳು, ವೃತ್ತಿಪರ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಸೆ. 30ರಂದು ಬೆಳಗ್ಗೆ 7.30ಕ್ಕೆ ಮಂಗಳಾದೇವಿ ರಾಮಕೃಷ್ಣ ಮಿಶನ್‌ನ ಸ್ವಾಮಿ ಏಕಾಗಮಯನಂದಜಿ ಅವರು ಮಂಗಳಾ ಸ್ಟೇಡಿಯಂನಲ್ಲಿ ವಾಕಥಾನ್‌ಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಗ್ರೀನ್ ವಾಕಥಾನ್ ಮಂಗಳೂರಿನ ಪುರಭವನದ ಬಳಿ ಸಮಾರೋಪಗೊಳ್ಳಲಿದ್ದು, ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತಿರುವ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು. ಮಂಗಳೂರಿನ ಲಾಲ್‌ಬಾಗ್, ಪಿವಿಎಸ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ ಮೂಲಕ ಗ್ರೀನ್ ವಾಕಥಾನ್ ಸಾಗಲಿದೆ. ಈ ಅತ್ಯಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬಿಐಟಿ ಮತ್ತು ಬೀಡ್ಸ್ ಮನವಿ ಮಾಡಿದೆ.

ನೋಂದಣಿ ಮತ್ತು ಉಚಿತ ಟಿ-ಶರ್ಟ್ ಪಡೆಯಲು ಈ ಲಿಂಕ್‌ಗೆ ಕ್ಲಿಕ್ ಮಾಡಿ: www.bit.ly/greenwalkathon

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News