×
Ad

ಮಂಗಳೂರಿಗೆ ಆಗಮಿಸಿದ ಏಶ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ ವಿನ್ನರ್ಸ್‌

Update: 2018-09-27 17:56 IST

ಮಂಗಳೂರು, ಸೆ.27: ದುಬೈಯಲ್ಲಿ ಸೆ.18ರಿಂದ 24ರವರೆಗೆ ನಡೆದ ಏಶ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಜಯಗಳಿಸಿದ ವಿನ್ನರ್ಸ್‌ಗಳು ಗುರುವಾರ ಮಂಗಳೂರಿಗೆ ಆಗಮಿಸಿದರು.

ವಿಜೇತರಾದ, ಕರಾವಳಿ ಪ್ರತಿಭೆಗಳಾದ ಅಕ್ಷತಾ ಪೂಜಾರಿ, ರಕ್ಷಿತ್ ಬೋಳಾರ್, ಅರ್ಷದ್ ಉಲ್ಲಾ, ವಿಜಯ್ ಕಂಚನ್, ಮಂಜುನಾಥ್ ಮಲ್ಯ ಸೇರಿದಂತೆ ಒಟ್ಟು 25 ವಿಜೇತರು ತಾಯ್ನಿಡಿಗೆ ವಾಪಸಾದರು. ಎಲ್ಲ ವಿಜೇತರನ್ನು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಶನ್ ಮೂಲಕ ಆಗಮಿಸಿದ ಪದಕ ವಿಜೇತರನ್ನು ಮನಪಾ ಮೇಯರ್ ಭಾಸ್ಕರ್ ಕೆ., ವೇಟ್‌ಲಿಫ್ಟರ್ ಸತೀಶ್ ಕುದ್ರೋಳಿ, ಮಾಜಿ ಉಪ ಮೇಯರ್ ರಾಜೇಂದ್ರಕುಮಾರ್, ಬಾಲಾಂಜನೇಯ ಜಿಮ್‌ನ ಕ್ರೀಡಾಪಟುಗಳು ಹಾಗೂ ಸದಸ್ಯರು ಹಾರ್ದಿಕವಾಗಿ ಸ್ವಾಗತಿಸಿ, ಮೆರವಣಿಗೆಯಲ್ಲಿ ಕರೆತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News