ರಫೇಲ್ ಡೀಲ್: ಪ್ರಧಾನಿ ಮೋದಿಗೆ ಯಶವಂತ್ ಸಿನ್ಹಾ ಅವರ 6 ಪ್ರಶ್ನೆಗಳು

Update: 2018-09-27 14:32 GMT

1.ರಕ್ಷಣಾ ಸಾಮಗ್ರಿಗಳ ಖರೀದಿಗೆ ಇರುವ ಸುವ್ಯವಸ್ಥಿತ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ 36 ಜೆಟ್ ಗಳನ್ನು ತನ್ನ ಪ್ಯಾರಿಸ್ ಭೇಟಿ ವೇಳೆಯೇ ಪ್ರಧಾನಿ ( ಜೊತೆಗೆ ರಕ್ಷಣಾ ಸಚಿವರು ಇರಲಿಲ್ಲ) ಅಂತಿಮಗೊಳಿಸಿದ್ದು ಏಕೆ ?

2. ಫೈಟರ್ ಜೆಟ್ ಗಳ ಸಂಖ್ಯೆಯನ್ನು 126 ರಿಂದ 36 ಕ್ಕೆ ಇಳಿಸುವ ಮೂಲಕ ಪ್ರಧಾನಿ ದೇಶದ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿಲ್ಲವೇ?

3. HAL ಅನ್ನು ಸಂಪೂರ್ಣವಾಗಿ ಹೊರಗಿಡುವ ಮೂಲಕ ತಾನೇ ಭಾರೀ ಪ್ರಚಾರದಲ್ಲಿ ಪ್ರಾರಂಭಿಸಿದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಪ್ರಧಾನಿ ಹಾಸ್ಯಾಸ್ಪದ ಮಾಡಿ ಬಿಟ್ಟಿಲ್ಲವೇ ? 

4.ಪ್ರಧಾನಿಯೇ ಸ್ವತಃ ಶಿಫಾರಸು ಮಾಡಿ ಅನನುಭವಿ ಖಾಸಗಿ ಕಂಪೆನಿಯೊಂದನ್ನು ಇಂತಹ ಮಹತ್ವದ ಯೋಜನೆಯಲ್ಲಿ ಪಾಲುದಾರರಾಗಿಸಿದ್ದು ಇಡೀ ಒಪ್ಪಂದದ ಪ್ರಾಮಾಣಿಕತೆಯ ಬಗ್ಗೆಯೇ ಗಂಭೀರ ಅನುಮಾನ ಮೂಡಿಸುವುದಿಲ್ಲವೇ ? 

5. ರಫೇಲ್ ಒಪ್ಪಂದದಲ್ಲಿ ಏನೂ ಅನುಮಾನಾಸ್ಪದ ನಡೆ ನಡೆದೇ ಇಲ್ಲ ಎಂದಾದರೆ ಸರಕಾರ ಆ ಕುರಿತ ಸತ್ಯ ಬಹಿರಂಗಪಡಿಸದೆ ತಾಂತ್ರಿಕ ಸಬೂಬುಗಳನ್ನು ನೀಡುತ್ತಿರುವುದೇಕೆ ? 

6. ಸರಕಾರದ ಕೈ ನಿಷ್ಕಳಂಕ ಎಂದಾದರೆ ಅದು ತನಿಖೆಯಿಂದ ಜಾರಿಕೊಳ್ಳಲು ಯತ್ನಿಸುತ್ತಿರುವುದೇಕೆ ? ಈಗಾಗಲೇ ಬಹಿರಂಗವಾಗಿರುವ ಮಾಹಿತಿಗಳ ಬಗ್ಗೆ ಸರಕಾರ ಪಾರದರ್ಶಕವಾಗಿ ಬಹಿರಂಗಪಡಿಸುವ ಬದಲು ಮುಚ್ಚಿಡುತ್ತಿರುವುದು  ಏಕೆ ? ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲದ ಇಂತಹ ಅವ್ಯವಹಾರವನ್ನು ಸಮರ್ಥಿಸಿಕೊಳ್ಳಲು ಅದು ತನಗೆ ಬೇಕಾದ ಸತ್ಯಗಳನ್ನು, ಅರ್ಧ ಸತ್ಯಗಳನ್ನು, ಸುಳ್ಳುಗಳನ್ನು ಮತ್ತು ಬಯ್ಗುಳಗಳನ್ನು ಬಳಸುತ್ತಿರುವುದು ಏಕೆ? 

ndtv.com ಗೆ ಯಶವಂತ್ ಸಿನ್ಹಾ ಅವರು ಬರೆದ ಲೇಖನದಿಂದ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News