ಅನೈತಿಕ ಸಂಬಂಧ ಕಾಯ್ದೆ ರದ್ದು ‘ಮಹಿಳಾ ವಿರೋಧಿ’: ಸ್ವಾತಿ ಮಲಿವಾಲ್
ಹೊಸದಿಲ್ಲಿ, ಸೆ. 27: ಅನೈತಿಕತೆಗೆ ಸಂಬಂಧಿಸಿದ ಕಾನೂನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು ಮಹಿಳೆ ವಿರೋಧಿ ಎಂದು ಕರೆದು ದಿಲ್ಲಿ ಮಹಿಳಾ ಸಮಿತಿ ವರಿಷ್ಠ ಸ್ವಾತಿ ಮಲಿವಾಲ್ ಗುರುವಾರ ಟ್ವಿಟ್ಟರ್‌ನಲ್ಲಿ ಟ್ರಾಲ್ ಮಾಡಿದ್ದಾರೆ. ಅನೈತಿಕತೆಗೆ ಪುರುಷನನ್ನು ಶಿಕ್ಷಿಸುವ ಹಾಗೂ ಮಹಿಳೆಯನ್ನು ಶಿಕ್ಷಿಸದ, ಪತಿ ಪತ್ನಿಯನ್ನು ಸೊತ್ತೆಂದು ಪರಿಗಣಿಸುವ 158 ವರ್ಷಗಳ ಹಿಂದಿನ ಕಾನೂನು ‘ಅನೈತಿಕತೆ ಅಪರಾಧ’ ಮುಂದುವರಿಯಲಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿತ್ತು. ತೀರ್ಪಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹಾಗೂ ಟ್ಟೀಟ್ ಮಾಡಿರುವ ಮಲಿವಾಲ್, ಅನೈತಿಕತೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ವಿವಾಹಿತ ದಂಪತಿ 4 ಅನೈತಿಕ ಸಂಬಂಧ ಇರಿಸಿಕೊಳ್ಳಲು ಅವರು ಪರವಾನಿಗೆ ನೀಡಿದ್ದಾರೆ. ಹಾಗಾದರೆ, ವಿವಾಹಕ್ಕೆ ಯಾವ ಪವಿತ್ರತೆ ಇದೆ ? 497 ಕಾಯ್ದೆಯ ಲಿಂಗಭೇದ ಅಳಿಸುವ, ಮಹಿಳೆ ಹಾಗೂ ಪುರುಷನ ಇಬ್ಬರ ಅನೈತಿಕ ಸಂಬಂಧವನ್ನೂ ಅಪರಾಧೀಕರಣಗೊಳಿಸುವ ಬದಲು ಅಪರಾಧ ಅಲ್ಲ ಎಂದು ಹೇಳಿರುವುದು ಸಂಪೂರ್ಣ ಮಹಿಳಾ ವಿರೋಧಿ ನಿರ್ಧಾರ ಎಂದಿದ್ದಾರೆ. ಮಲಿವಾಲ್ ಅವರ ಹೇಳಿಕೆಯನ್ನು ಕೆಲವರು ಟೀಕಿಸಿದ್ದಾರೆ. ‘ಈ ಮಹಿಳೆಗೆ ಅರಿವಿನ ಕೊರತೆ ಇದೆ’ ಎಂದು ಒಬ್ಬರು, ‘ಅವರು ಅರಿವನ್ನು ಕಳೆದುಕೊಂಡಿದ್ದಾರೆ’ ಎಂದು ಇನ್ನೊಬ್ಬರು ಹೇಳಿಕೆ ನೀಡಿದ್ದಾರೆ. ಒಬ್ಬರು ಅವರ ಮಹಿಳಾ ಸಬಲೀಕರಣದ ನಿಲುವನ್ನು ಪ್ರಶ್ನಿಸಿದ್ದಾರೆ. ‘‘ಸ್ವಾತಿ ಮಲಿವಾಲ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಅವರು ಪ್ರಗತಿಪರ ಮಹಿಳೆ ಅಲ್ಲ. ಅವರು ಮಹಿಳಾ ಸಬಲೀಕರಣ ನಿಲುವ ದೇಶದ ಸಾಂಪ್ರದಾಯಿಕ ಪಿತೃಪ್ರಧಾನ ವ್ಯವಸ್ಥೆಯಿಂದ ರೂಪುಗೊಂಡಿರುವುದು’’ ಎಂದಿದ್ದಾರೆ.