×
Ad

ಉಡುಪಿ: ಗುಡುಗು ಸಹಿತ ಮಳೆ

Update: 2018-09-27 22:17 IST

ಉಡುಪಿ, ಸೆ. 27: ಸುಮಾರು ಒಂದು ತಿಂಗಳ ಕಾಲ ನಾಪತ್ತೆಯಾಗಿದ್ದ ಮಳೆ ಇಂದು ಬೆಳಗ್ಗೆ ಹಠಾತ್ತನೆ ಗುಡುಗು ಸಹಿತ ಧಾರಾಕಾರವಾಗಿ ಸುರಿಯಿತು. ಆಗಸ್ಟ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಹಲವು ಅನಾಹುತಗಳಿಗೆ ಕಾರಣವಾದ ಬಳಿಕ ಕೊನೆಯ ವಾರದಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು.

ಇದರಿಂದ ಭತ್ತದ ಬೆಳೆ ಫಲಬರುವ ಸಮಯದಲ್ಲಿ ನೀರಿಲ್ಲದೇ ಒಣಗಿ ಹೋಗಿತ್ತು. ಇದು ರೈತರಲ್ಲಿ ಚಿಂತೆಗೆ ಕಾರಣವಾಗಿತ್ತು. ಕೆಲವು ಕಡೆಗಳಲ್ಲಿ ಗದ್ದೆಗಳಿಗೆ ನೀರು ಹಾಯಿಸುವ ಪ್ರಯತ್ನಗಳೂ ನಡೆದಿದ್ದವು. ಇನ್ನು ನದಿ, ತೊರೆ, ತೋಡುಗಳಲ್ಲಿ ನೀರು ಹಠಾತ್ತನೆ ಒಣಗಿ, ಸಪ್ಟಂಬರ್ ತಿಂಗಳಲ್ಲೇ ಅಕ್ಕಪಕ್ಕದ ಗದ್ದೆಗಳಿಗೆ ಉಪ್ಪು ನೀರು ಸಹ ನುಗ್ಗಿ ಬೆಳೆ ಹಾನಿಗೊಳಗಾಗಿತ್ತು.

ಇಂದು ಬೆಳಗ್ಗೆ 6 ಗಂಟೆಯಿಂದ ಸುಮಾರು ಒಂದು ಗಂಟೆ ಕಾಲ ಸತತವಾಗಿ ಮಳೆ ಸುರಿಯಿತು. ನಂತರವೂ ಹನಿ ಮಳೆ ಮುಂದುವರಿದಿತ್ತು. ಇಂದು ಉಡುಪಿಯಲ್ಲಿ 28.2ಮಿ.ಮೀ., ಕುಂದಾಪುರದಲ್ಲಿ 10.1 ಹಾಗೂ ಕಾರ್ಕಳದಲ್ಲಿ 11ಮಿ.ಮೀ. ವುಳೆಯಾದ ಬಗ್ಗೆ ವರದಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News