×
Ad

ಕರ್ಣಾಟಕ ಬ್ಯಾಂಕ್‌ನಿಂದ ದ್ವಿಚಕ್ರವಾಹನಗಳಿಗೆ ಕ್ವಿಆರ್ ಕೋಡ್ ವಿಮಾ ಪಾಲಿಸಿ

Update: 2018-09-27 22:41 IST

ಮಂಗಳೂರು, ಸೆ.27: ಬಜಾಜ್ ಅಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿ ಲಿ.ನ ಸಂಯೋಜನೆಯೊಂದಿಗೆ ಕರ್ಣಾಟಕ ಬ್ಯಾಂಕ್ ವಿಶಿಷ್ಟವಾದ ಕ್ಯೂಆರ್ ಕೋಡ್ ಆಧಾರಿತ ದ್ವಿಚಕ್ಕ ವಾಹನದ ವಿಮಾ ಪಾಲಿಸಿಯನ್ನು ಗುರುವಾರ ಲೋಕಾರ್ಪಣೆಗೊಳಿಸಿತು.

ಈ ಡಿಜಿಟಲ್ ಉಪಕ್ರಮದ ಮೂಲಕ ದ್ವಿಚಕ್ರ ವಾಹನ ವಿಮೆ ಪಾಲಿಸಿಯನ್ನು ಕಾಗದರಹಿತ ಹಾಗೂ ತ್ವರಿತವಾಗಿ ಎರಡು ನಿಮಿಷಗಳಲ್ಲಿ ನೀಡಬಹುದಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್., ದೇಶದಲ್ಲಿ ಶೇ. 25ರಷ್ಟು ದ್ವಿಚಕ್ರ ವಾಹನ ಗಳಿಗೆ ಮಾತ್ರ ವಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ವಿಮಾ ಕ್ಷೇತ್ರದ ಉದ್ಯಮಕ್ಕೆ ಈ ಪ್ರದೇಶದಲ್ಲಿ ವಿಪುಲವಾದ ಅವಕಾಶಗಳಿವೆ. ತನ್ನೆಲ್ಲಾ ಗ್ರಾಹಕರಿಗೆ ವೌಲ್ಯ ವರ್ಧಿತ ಹೆಚ್ಚು ಉತ್ಪನ್ನಗಳನ್ನು ನೀಡಲು ಕರ್ಣಾಟಕ ಬ್ಯಾಂಕ್‌ಗೆ ಸಂತಸವಾಗುತ್ತಿದೆ ಎಂದರು.

ಬಜಾಜ್ ಅಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್‌ನ ಅಧ್ಯಕ್ಷೆ ಅಲ್ಪನಾ ಸಿಂಗ್, ಬ್ಯಾಂಕಿನ ಮುಖ್ಯ ನಿರ್ವಹಣಾ ಅಧಿಕಾರಿ ರಾಘವೇಂದ್ರ ಭಟ್ ಎಂ., ಜನರಲ್ ಮ್ಯಾನೇಜರ್ ಚಂದ್ರಶೇಖರ್ ರಾವ್ ಬಿ., ಬಾಲಚಂದ್ರ ವೈ.ವಿ., ನಾಗರಾಜ್ ರಾವ್ ಬಿ., ಗೋಕುಲ್‌ದಾಸ್ ಪೈ, ಮಂಜುನಾಥ ಭಟ್ ಬಿ.ಕೆ., ಮಹಾಲಿಂಗೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ಬಜಾಜ್ ಅಲಯನ್ಸ್‌ನ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಜಾಕ್ಸನ್ ಜಾಕಬ್ ಹಾಗೂ ಇತರ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News