×
Ad

ಬಜ್ಪೆ: ಮನೆ ಬಳಕೆಯ ಉತ್ಪನ್ನಗಳ ವಿತರಣಾ ಮಳಿಗೆ ‘ಸ್ಮಾರ್ಟ್ ಟ್ರೇಡರ್ಸ್’ ಉದ್ಘಾಟನೆ

Update: 2018-09-27 22:44 IST

ಮಂಗಳೂರು, ಸೆ. 27: ಬಜ್ಪೆಯ ಮುರ ನಗರದಲ್ಲಿ ‘ಕ್ಲೆಂಕೋ’ ಕಂಪೆನಿಯ ಮನೆ ಬಳಕೆ ಉತ್ಪನ್ನಗಳ ವಿತರಣಾ ಮಳಿಗೆ ಸ್ಮಾರ್ಟ್ ಟ್ರೇಡರ್ಸ್ ಉದ್ಘಾಟನೆಗೊಂಡಿತು. ಸ್ಮಾರ್ಟ್ ಟ್ರೇಡರ್ಸ್ ಮಾಲಕರಾದ ಶಬೀರ್ ಅಲಿಯವರ ತಂದೆ ಮುಹಮ್ಮದ್ ಬಾವಾ ಹಾಗೂ ತಾಯಿ ಮೈಮೂನಾ ಮಳಿಗೆಯನ್ನು ಉದ್ಘಾಟಿಸಿದರು.

ಬಜ್ಪೆಯ ಈದ್ಗಾ ಮಸ್ಜಿದ್ ಹಿಫ್ಲುಲ್ ಕುರ್ಆನ್ ಪ್ರಿನ್ಸಿಪಾಲ್ ಹಾಫಿಝ್ ಶಾಹುಲ್ ಹಮೀದ್ ಝುಹ್ರೀ ದುವಾಶಿರ್ವಚನ ಗೈದರು. ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಅತಿಥಿಗಳಾಗಿ ಆಗಮಿಸಿದ್ದರು. ನಂತರ ಮಾತನಾಡಿದ ಸ್ಮಾರ್ಟ್ ಟ್ರೇಡರ್ಸ್ ಮಾಲಕ ಶಬೀರ್ ಅಲಿ, ಕ್ಲೆಂಕೋ ಕಂಪನಿಯ ಮನೆ ಬಳಕೆಯ ಎಲ್ಲಾ ವಸ್ತುಗಳು ನಮ್ಮಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಮನೆ ಬಳಕೆಯ ವಸ್ತುಗಳಾದ ಕ್ಲೆಂಕೋ ಡಿಟರ್ಜೆಂಟ್ ಪೌಡರ್, ಕ್ಲೆಂಕೋ ಡಿಶ್ ವಾಶ್, ಕ್ಲೆಂಕೋ ಗ್ಲಾಸ್ ಕ್ಲೀನರ್, ಕ್ಲೆಂಕೋ ಟಾಯ್ಲೆಟ್ ಕ್ಲೀನರ್ ಹಾಗೂ ಕ್ಲೆಂಕೋ ಫೆನಾಯಲ್ ಸ್ಮಾರ್ಟ್ ಟ್ರೇಡರ್ಸ್ ನಲ್ಲಿ ರಖಂ ದರದಲ್ಲಿ ದೊರೆಯಲಿದೆ. ಆರಂಭದ ಕೊಡುಗೆಯಾಗಿ ಟಾಯ್ಲೆಟ್ ಕ್ಲೀನರ್ ಜೊತೆಗೆ ಡಿಶ್ ವಾಶ್ ಕ್ಲೀನರ್ ಉಚಿತವಾಗಿಯೂ, ಕೇವಲ 100 ರೂಪಾಯಿಗಳಿಗೆ ಎರಡು ಫೆನಾಯಿಲ್ ಒಳಗೊಂಡಂತೆ ಗ್ರಾಹಕರಿಗೆ ಅನೇಕ ಆಫರ್ ಗಳು ಲಭ್ಯವಿದೆ ಎಂದು ಸ್ಮಾರ್ಟ್ ಟ್ರೇಡರ್ಸ್ ಮಾಲಕ ಶಬೀರ್ ಅಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News