ಕೊರಿಯಾ ಓಪನ್: ಸೈನಾಗೆ ಸೋಲು

Update: 2018-09-28 13:05 GMT

ಸಿಯೋಲ್, ಸೆ.28: ಕೊರಿಯಾ ಓಪನ್ ಬ್ಯಾಡ್ಮಿಂಟನ್‌ನ ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಸೋಲು ಅನುಭವಿಸಿದರು.

ಸೈನಾ ನೆಹ್ವಾಲ್ ಅವರು ಮಾಜಿ ವಿಶ್ವ ಚಾಂಪಿಯನ್ ಜಪಾನ್‌ನ ನೊರೊಮಿ ಒಕುಹರಾ ವಿರುದ್ಧ 21-15, 15-21, 20-22 ಅಂತರದಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಕೊರಿಯಾ ಓಪನ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಒಕುಹರಾ ವಿರುದ್ಧ 6-3 ಗೆಲುವಿನ ದಾಖಲೆ ಹೊಂದಿರುವ ಸೈನಾ ನೆಹ್ವಾಲ್ ಪಂದ್ಯದ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದ್ದರು. ಬಳಿಕ ನಿಧಾನವಾಗಿ ಅವರ ಹಿಡಿತ ಸಡಿಲಗೊಂಡಿತು.

59 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೊದಲ ಸೆಟ್‌ನಲ್ಲಿ 21-15 ಅಂತರದಲ್ಲಿ ಗೆಲುವು ದಾಖಲಿಸಿದ್ದ ಸೈನಾ ಬಳಿಕ ಎರಡು ಸೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಸೋಲು ಅನುಭವಿಸಿದರು. ನಾಲ್ಕು ಬಾರಿ ಮ್ಯಾಚ್ ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟಿರುವುದು ಸೈನಾಗೆ ಸೋಲಿಗೆ ಕಾರಣವಾಯಿತು.

ಸೈನಾ 2018ರ ಜನವರಿಯವಲ್ಲಿ ಇಂಡೋನೇಶ್ಯ ಮಾಸ್ಟರ್ಸ್‌ನಲ್ಲಿ ಫೈನಲ್ ತಲುಪಿದ್ದರು. ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಿ.ವಿ.ಸಿಂಧು ಅವರನ್ನು ಮಣಿಸಿ ಚಿನ್ನ ಪಡೆದಿದ್ದರು. 18ನೇ ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News