×
Ad

ಉಡುಪಿ: ಕಾಂಗ್ರೆಸ್ ಭವನದಲ್ಲಿ ಗಾಂಧಿ-150

Update: 2018-09-28 20:32 IST

ಉಡುಪಿ, ಸೆ.28: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆ ಯಾದ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಆಶ್ರಯದಲ್ಲಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನದ ‘ಗಾಂಧಿ-150’ ಕಾರ್ಯಕ್ರಮ ಅ.2ರಂದು ಮಂಗಳವಾರ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9:45ಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಂಧಿ ಜೀವನ ಚರಿತ್ರೆ ಕುರಿತಂತೆ ರಸಪ್ರಶ್ನೆ ಸ್ಪರ್ಧೆ, ಅಪರಾಹ್ನ 12:00ಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಸಿರಿಲ್ ಮಥಾಯಸ್‌ರಿಂದ ಗಾಂಧಿ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಬಳಿಕ 12:30ಕ್ಕೆ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಚುನಾಣೆಯಲ್ಲಿ ಸ್ಪರ್ಧಿಸಿದ ಸ್ಪರ್ಧಿಗಳಿಗೆ ಸಂಮಾನ ಕಾರ್ಯಕ್ರಮ ಹಾಗೂ ಶಕ್ತಿ ಕಾರ್ಯಕ್ರಮದ ನೋಂದಾವಣೆ ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣುನಾಥ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹಾಗೂ ಇತರ ಾಯಕರ ಸಮ್ಮುಖದಲ್ಲಿ ನಡೆಯಲಿದೆ.

ಅ.2ರಂದು ಉದ್ಘಾಟನೆಗೊಳ್ಳುವ ‘ಗಾಂಧಿ-150’ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವರ್ಷವಿಡೀ ನಡೆಯಲಿದೆ ಎಂದು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಸಂಯೋಜಕಿ ರೋಶನಿ ಒಲಿವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News