×
Ad

ಅಂಬಲಪಾಡಿ: ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಧರಣಿ

Update: 2018-09-28 21:06 IST

ಉಡುಪಿ, ಸೆ. 28: ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಬ್ಯಾಂಕ್ ಆಫ್ ಬರೋಡ, ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್‌ಗಳ ವಿಲೀನದ ಬಗ್ಗೆ ಕೇಂದ್ರ ಸರಕಾರ ಕೈಗೊಂಡ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಂಬಲಪಾಡಿಯಲ್ಲಿರುವ ವಿಜಯ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಲಾಯಿತು.

ವಿಜಯ ಬ್ಯಾಂಕಿನ ಶಿವಪ್ರಸಾದ್, ದೇನಾ ಬ್ಯಾಂಕಿನ ಶ್ರೀಪತಿ ಭಟ್, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ಕಾರ್ಪೊರೇಶನ್ ಬ್ಯಾಂಕಿನ ನಾಗೇಶ್ ನಾಯಕ್ ಮಾತನಾಡಿ ಕೇಂದ್ರ ಸರಕಾರದ ಈ ಏಕಪಕಿ್ಷೀಯ ನಿರ್ಧಾರವನ್ನು ವಿರೋಧಿಸಿದರು.

ಕೆನರಾ ಬ್ಯಾಂಕಿನ ವರದರಾಜ, ಎಸ್‌ಬಿಐಯ ಪ್ರಕಾಶ್ ಜೋಗಿ, ಕಾರ್ಪೊ ರೇಶನ್ ಬ್ಯಾಂಕಿನ ರಘುರಾಮಕೃಷ್ಣ ಬಲ್ಲಾಳ್, ಅಧಿಕಾರಿಗಳ ಸಂಘಟನೆಯ ರವಿಶಂಕರ್, ಹೇಮಂತ್ ಯು.ಕಾಂತ್, ಅನಂತಪದ್ಮನಾಭ, ನೌಕರರ ಸಂಘ ಟನೆಯ ರವೀಂದ್ರ, ರಮೇಶ್, ಜಯನ್ ಮಲ್ಪೆ, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಹೆರಾಲ್ಡ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News