ನದಿಗೆ ಬಿದ್ದು ವ್ಯಕ್ತಿ ಮೃತ್ಯು
Update: 2018-09-28 21:08 IST
ಕಾರ್ಕಳ, ಸೆ.28: ಮುಡಾರು ಗ್ರಾಮದ ಕಡಾರಿ ಸ್ವರ್ಣ ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಬಜಗೋಳಿ ಪಾಜಿನಡ್ಕ ನಿವಾಸಿ ಶೇಖರ ಸಾಲಿಯಾನ್ ಎಂಬ ವರ ಮಗ ಮೋಹನ(27) ಎಂದು ಗುರುತಿಸಲಾಗಿದೆ. ಇವರು ಸೆ.27ರ ಮಧ್ಯಾಹ್ನ 12ಗಂಟೆಯಿಂದ ಸೆ.28ರ ಬೆಳಗ್ಗೆ 10ಗಂಟೆ ಮಧ್ಯಾವಧಿಯಲ್ಲಿ ನದಿ ಯಲ್ಲಿ ಮೀನಿಗೆ ಬಲೆ ಹಾಕುವಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.