ಹೊಳೆಯಲ್ಲಿ ಮುಳುಗಿ ಮಹಿಳೆ ಮೃತ್ಯು

Update: 2018-09-28 15:40 GMT

ಗಂಗೊಳ್ಳಿ, ಸೆ.28: ಹಡವು ಗ್ರಾಮ ಕೆರೆಮನೆ ಎಂಬಲ್ಲಿರುವ ಹೊಳೆಯಲ್ಲಿ ಸೆ.28ರಂದು ಅಟ್ಟ ಬಲೆ ಹಾಕಿ ಮೀನು ಹಿಡಿಯುತ್ತಿದ್ದ ಮಹಿಳೆಯೊಬ್ಬರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಹಡವು ಗ್ರಾಮದ ಸೀತು ದೇವಾಡಿಗ (65) ಎಂದು ಗುರುತಿಸ ಲಾಗಿದೆ.

ಇವರು ಬೆಳಗ್ಗೆ 10ಗಂಟೆಗೆ ಮನೆ ಸಮೀಪದ ಹೊಳೆಯಲ್ಲಿ ಅಟ್ಟ ಬಲೆ ಹಾಕಿ ಮೀನು ಹಿಡಿಯಲು ಹೋಗಿದ್ದು, ಈ ವೇಳೆ ನೀರಿನಲ್ಲಿ ಮುಳುಗಿ ನಾಪತ್ತೆಯಾ ಗಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಇವರ ಮೃತದೇಹ ಸೌಪರ್ಣಿಕ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News