ವೃದ್ಧೆಯ ವಾರಸುದಾರರಿಗೆ ಸೂಚನೆ
Update: 2018-09-28 22:45 IST
ಉಡುಪಿ, ಸೆ.28: ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಅಸಹಾಯಕ ರಾಗಿ ಕುಳಿತಿದ್ದ ಸುಮಾರು 80 ವರ್ಷದ ವೃದ್ಧೆಯನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ರಕ್ಷಿಸಿ ಉಡುಪಿ ಕೃಷ್ಣಮಠದ ಪಲಿಮಾರು ಮಠದಲ್ಲಿ ಆಶ್ರಯ ಒದಗಿಸಿದ್ದಾರೆ.
ವೃದ್ಧೆಯು ಬ್ರಾಹ್ಮಣ ಸಮಾಜದವರಾಗಿದ್ದು, ಹೆಸರು ಜಯಮ್ಮ ಎಂದು ತಿಳಿಸಿರುತ್ತಾರೆ. ಇವರ ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು (ದೂರವಾಣಿ: 0820- 2526394) ಸಂಪರ್ಕಿಸುವಂತೆ ಸಹಾಯವಾಣಿಯ ಪ್ರಕಟಣೆ ತಿಳಿಸಿದೆ.