ಮತ್ತೆ ಬಗೆ ಬಗೆಯ ಮೀನುಗಳು: ಟ್ರಾಲ್‍ಬೋಟ್ ನಿಷೇಧವೇ ಕಾರಣ

Update: 2018-09-28 17:24 GMT

ಪಡುಬಿದ್ರೆ, ಸೆ. 28: ಶುಕ್ರವಾರವೂ ನಡಿಪಟ್ಣ ಸಮುದ್ರ ತೀರದ ಪ್ರದೇಶದಲ್ಲಿ  ಪಂಡರಿನಾಥ ಕೈರಂಪಣಿ ತಂಡಕ್ಕೆ ಹಲವು ಬಗೆಯ ಮೀನುಗಳು ಸೇರಿ ಸುಮಾರು ನಾಲ್ಕೈದು ಟನ್ ಮೀನುಗಳು ದೊರೆತಿವೆ. ಆದರೆ ಈ ರೀತಿ ಮೀನುಗಳು ಸಿಗಲು ಟ್ರಾಲ್‍ಬೋಟ್ ನಿಷೇಧವೇ ಕಾರಣ ಎನ್ನುತ್ತಾರೆ ಮೀನುಗಾರರು.

ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಮೀನುಗಾರಿಕೆ ನಡೆಸುತ್ತಿರುವ ಪಂಡರೀನಾಥ ಕೈರಂಪಣಿ ತಂಡಕ್ಕೆ ಕಳೆದ ಕೆಲದಿನಗಳಿಂದ ಮೀನುಗಾರಿಕೆ ಮೂಲಕ ಲಕ್ಷಾಂತರ ವ್ಯವಹಾರವಾಗಿದ್ದು, ಸರ್ಕಾರ ತೀರ ಮೀನುಗಾರಿಕೆಗೆ ಹಾಗೂ ಮೀನು ಮರಿ ಇಡುವ ಸಂದರ್ಭ ಸಮಸ್ಯೆಯುಂಟಾಗುತ್ತದೆ ಎಂಬ ವೈಜ್ಞಾನಿಕ ವರದಿಯ ಹಿನ್ನೆಲೆಯಲ್ಲಿ ಬುಲ್ ಟ್ರಾಲ್ ಮೀನುಗಾರಿಕೆಗೆ ನಿಷೇಧ ಹೇರಿತ್ತು. ಈ ನಿಷೇಧ ಈ ಬಾರಿ ಕಟ್ಟುನಿಟ್ಟಾಗಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಯಾವುದೇ ಬುಲ್ ಟ್ರಾಲ್ ಯಾಂತ್ರಿಕ ಬೋಟುಗಳು ತೀರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿಲ್ಲ. ಹಾಗಾಗಿ ತೆಪ್ಪ ರೀತಿಯಲ್ಲಿ ಇರುವ ಮೀನುಗಳು ತೀರ ಸಮುದ್ರಕ್ಕೆ ಸಲೀಸಾಗಿ ಸಾಗಿ ಬಂದಿವೆ ಎಂದು ಕೈರಂಪಣಿ ಮೀನುಗಾರರು ಪಂಡರೀನಾಥ ಕೈರಂಪಣಿ ಫಂಡ್‍ನ ಲಿಂಗಪ್ಪ ಪುತ್ರನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News