×
Ad

ಮಂಗಳೂರು: ಕೈಗಾಡಿ ಎಳೆದು ವಿಶಿಷ್ಟ ರೀತಿಯಲ್ಲಿ ರಸ್ತೆ ಉದ್ಘಾಟನೆ

Update: 2018-09-28 23:11 IST

ಮಂಗಳೂರು, ಸೆ. 28: 45ನೇ ಪೋರ್ಟ್ ವಾರ್ಡಿನ ಹಳೇ ಬಂದರು ಮತ್ತು ಬಾಂಬು ಬಜಾರ್ ಕಾಂಕ್ರೀಟ್ ರಸ್ತೆಯ ಉದ್ಘಾಟನೆ  ಕಾರ್ಯಕ್ರಮ ನಡೆಯಿತು. ಹಳೆ ಬಂದರಿನ ಸಗಟು ಮಾರುಕಟ್ಚೆಯ ಹಮಾಲಿ ಕಾರ್ಮಿಕರು ಕೈಗಾಡಿ ಎಳೆಯುವ ಮೂಲಕ ವಿನೂತನ ಶೈಲಿಯಲ್ಲಿ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು. 

 ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಬದ್ರಿಯಾ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್, ಇಂಡಿಯನ್ ಒವರ್ಸೀಸ್ ಬ್ಯಾಂಕ್ ಬಂದರು ಶಾಖೆಯ ಪ್ರಬಂಧಕರಾದ ಸುರೇದ್ರನ್, ಟೆಂಪೋ ಚಾಲಕರ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ರಿಕ್ಷಾ ಚಾಲಕರ ಅಧ್ಯಕ್ಷರಾದ ಗುರುದತ್ ನಾಯಕ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಮತ್ತು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಝ್, ಕೆನರಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಪಿ.ಬಿ ಅಬ್ದುಲ್ ಹಮೀದ್, ಬಂದರು ಶ್ರಮಿಕ ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಒಣಮೀನು ವ್ಯಾಪಾರದ ಕಾರ್ಯದರ್ಶಿ ಯಾದ ಎಂ.ಸಾಲಿ, ಆದಿಶಕ್ತಿ ಪಾರ್ಸೆಲ್ ಮಾಲಕರಾದ ಸುಧಾಕರ್, ಪೋರ್ಟ್ ವಾರ್ಡ್ ಅಧ್ಯಕ್ಷರಾದ ಸುಧಾಕರ್ ಶೆಣೈ, ವರ್ತಕರ ಸಂಘದ ಅಬ್ಬಾಸ್ ಹಾಜಿ, ಸ್ಥಳೀಯಾರಾದ ಸಿದ್ದೀಕ್, ಫೈಝಲ್, ನಿಸಾರ್, ಮುಸ್ತಫಾ, ಜಯರಾಂ, ಹರೀಶ್, ಇಕ್ಬಾಲ್ ಬಿ.ಎಸ್, ಸತ್ತಾರ್, ತೌಸೀಫ್, ಹರೀಶ್ ಕೆರೆಬೈಲ್,ಹಸನ್ ಮೋನು, ಮೊಹಮ್ಮದ್ ಮೋನು ರೆಹಮತ್ ಅಲಿ, ಯಸುಫ್, ಅರುಣ್ ಡಿಸೋಜ, ರೂಡಿ ಪಿಂಟೋ, ಜೆರಾಲ್ಡ್, ಇನ್ನಿತರರು ಉಪಸ್ಥಿತರಿದ್ದರು.

ಕೈಗಾಡಿ ಜಾಥಾದ ಹಿರಿಮೆ

ಈ ರಸ್ತೆ ಅಭಿವೃದ್ದಿಗೆ ಒತ್ತಾಯಿಸಿ ಹಿಂದಿನ ನಗರಾಡಳಿತದ  ಅವಧಿಯಲ್ಲಿ ಹಮಾಲಿ ಕಾರ್ಮಿಕರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಕೈಗಾಡಿ ಜಾಥಾ ನಡೆಸಿ ನಗರಪಾಲಿಕೆಗೆ ಕೈಗಾಡಿ ಚಲೋ ಮಾಡಿ ಪ್ರತಿಭಟನೆ ನಡೆಸಿದ್ದರು. ಅಬ್ದುಲ್ ಲತೀಫ್ ಅವರು ಪಾಲಿಕೆ ಸದಸ್ಯರಾಗಿ ಆಯ್ಕೆಗೊಂಡ ನಂತರ ಕಾರ್ಮಿಕರಿಗೆ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. 

ಕೊಟ್ಟ ಭರವಸೆಯಂತೆ ರಸ್ತೆ ನಿರ್ಮಿಸಲು ಶ್ರಮಿಸಿದ ಕಾರ್ಮಿಕರಿಗೆ ಕೊಟ್ಟ ಮಾತು ಉಳಿಸಿಕೊಟ್ಟ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಅವರನ್ನು ಕೈಗಾಡಿಯಲ್ಲಿ ಕೂರಿಸಿ ಸನ್ಮಾನಿಸಿ ಮೆರವಣಿಗೆ ನಡೆಸಿದರು. ಕಾರ್ಮಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಂದರು ಶ್ರಮಿಕರ ಸಂಘ ಕಾರ್ಯಕ್ರಮ ಆಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News