ಅ.1ರಂದು ದಲಿತರ ಹಕ್ಕುಗಳಿಗಾಗಿ ಪ್ರತಿಭಟನೆ
Update: 2018-09-29 17:05 IST
ಕುಂದಾಪುರ, ಸೆ.29: ಜಾತಿ ಅಸ್ಪಶ್ಯತೆ ಅಸಮಾನತೆ ಅವಮಾನಗಳ ವಿರುದ್ಧ ದಲಿತರಿಗೆ ಶಿಕ್ಷಣ ಉದ್ಯೋಗ ಭೂಮಿ, ಮನೆ, ಆರೋಗ್ಯ ಹಾಗೂ ದಲಿತ ಮೀಸಲಾತಿ, ದೌರ್ಜನ್ಯ ತಡೆ ಕಾಯಿದೆಗಳನ್ನು ಬಲಪಡಿಸಲು ಡಿಸಿ ಮನ್ನಾ ಭೂಮಿ ವಿತರಿಸಲು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಕುಂದಾಪುರ ತಾಲೂಕು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಅ.1ರಂದು ಬೆಳಗ್ಗೆ 11 ಗಂಟೆಗೆ ಕುಂದಾಪುರ ತಾಲೂಕು ಕಛೇರಿ ಎದುರು ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಇದಕ್ಕೂ ಮೊದಲು ಕುಂದಾಪುರ ಶಾಸ್ತ್ರಿ ವೃತ್ತದಿಂದ ತಹಶೀಲ್ದಾರ್ ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.