×
Ad

ಆರ್ಮಿ ಟ್ರೈನಿಂಗ್ ಕಮಾಂಡರ್ ಆಗಿ ಕೊಡಗಿನ ಪಿ.ಸಿ. ತಿಮ್ಮಯ್ಯ

Update: 2018-09-29 17:32 IST

ಮಡಿಕೇರಿ,ಸೆ.29 : ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯದಲ್ಲಿರುವ ಸೇನಾ ಜಿಲ್ಲೆ ಖ್ಯಾತಿಯ ಕೊಡಗಿನ ಅಧಿಕಾರಿಯೊಬ್ಬರು ಇದೀಗ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಮುಖ್ಯಸ್ಥರಾಗಿ ನಿಯುಕ್ತಿಗೊಳ್ಳುವ ಮೂಲಕ ಕೊಡಗಿನ ಸೇನಾ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.

ಲೇ.ಜ. ಪಟ್ಟಚೆರುವಂಡ ಸಿ. ತಿಮ್ಮಯ್ಯ ಅವರು ಶಿಮ್ಲಾದಲ್ಲಿರುವ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಕಮಾಂಡರ್ ಆಗಿ ನಿಯೋಜಿತರಾಗಿದ್ದಾರೆ. ಈ ಕೇಂದ್ರ ಭಾರತೀಯ ಸೇನೆಯ ಏಳು ಕಮಾಂಡ್‍ಗಳಲ್ಲಿ ಒಂದಾಗಿದೆ. ಈ ಹಿಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಬಿದ್ದಂಡ ಸಿ.ನಂದ ಅವರು ಈ ಶ್ರೇಣಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ನಿವೃತ್ತಗೊಂಡ ನಂತರ ಹಲವು ವರ್ಷಗಳ ಸುಧೀರ್ಘ ಅವಧಿಯ ಬಳಿಕ ಇದೀಗ ಪಟ್ಟಚೆರವಂಡ ಸಿ. ತಿಮ್ಮಯ್ಯ ಅವರು ಈ ಸ್ಥಾನವನ್ನು ಅಲಂಕಾರಿಸುತ್ತಿದ್ದಾರೆ.

ಇವರು ಪಟ್ಟಚೆರವಂಡ ಪೊನ್ನಪ್ಪ ಚಂಗಪ್ಪ ಹಾಗೂ ಗೌರು ಚಂಗಪ್ಪ ಅವರ ಪುತ್ರ. ಭುವನೇಶ್ವರದ ಸೈನಿಕ ಶಾಲೆಯಲ್ಲಿ ಓದಿದ ಇವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೊನ್‍ನಿಂದ ಖಡ್ಗ ಗೌರವದೊಂದಿಗೆ ಭಾರತೀಯ ಸೇನೆಯನ್ನು 1981ರ ಜುಲೈ 31ರಂದು ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News