ಫಾ. ಮಲ್ಲರ್ ವೈದ್ಯಕೀಯ ಶಿಕ್ಷಣ ಕಾಲೇಜು ತಂಡಕ್ಕೆ ಮೆಡಿಕ್ವಿಜ್-2018 ಪ್ರಶಸ್ತಿ
ಮಂಗಳೂರು, ಸೆ.29: ನಗರದ ಎ.ಜೆ. ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಪದವಿ ಪೂರ್ವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗಾಗಿ 7ನೇ ವಾರ್ಷಿಕ ಜಿಲ್ಲಾ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸ ಪ್ರಶ್ನೆ ಮೆಡಿಕ್ವಿಜ್ 2018 ಸ್ಪರ್ಧಾಕೂಟವು ಇಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಈ ಸ್ಪರ್ಧಾಕೂಟದಲ್ಲಿ ಫಾ.ಮಲ್ಲರ್ ವೈದ್ಯಕೀಯ ಶಿಕ್ಷಣ ಕಾಲೇಜನ್ನು ಪ್ರತಿನಿಧಿಸಿದ ಷಾನವಾಝ್ ಮತ್ತು ಸಂದೀಪ್ ರಾವ್ ಜೋಡಿ ತಂಡವು 170 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿ ಪ್ರತಿಷ್ಠಿತ ಮೆಡಿಕ್ವಿಜ್ ಪ್ರಶಸ್ತಿ ಪಡೆಯಿತು.
ಕೆ.ಎಂ.ಸಿ. ಮಣಿಪಾಲ ವೈದ್ಯಕೀಯ ಕಾಲೇಜನ್ನು ಪ್ರತಿನಿಧಿಸಿದ ಸುಫಿಯಾನ್ ಇಬ್ರಾಹಿಂ ಮತ್ತು ಜಾನವಿ ಶ್ರೀ ವಾತ್ಸವ ತಂಡವು70 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿತು.
ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎ.ಜೆ. ಶೆಟ್ಟಿಯವರು ಮುಖ್ಯಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಆಕರ್ಷಕ ಪ್ರಶಸ್ತಿ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಪ್ರದಾನ ಮಾಡಿ ಅಭಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಹೆಗ್ಡೆ, ವೈದ್ಯಕೀಯ ಶಾಸ್ತ್ರ ವಿಬಾಗದ ಮುಖ್ಯಸ್ಥ ಡಾ.ಇ.ವಿ.ಎಸ್. ಮೆಬನ್ ಮತ್ತು ಶ್ರೀನಿವಾಸ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಶಾಸ್ತ್ರದ ಮಖ್ಯಸ್ಥರಾದ ಡಾ. ಪ್ರದೀಪ್ ವರ್ಣೇಕರ್‌ರವರು ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ. ದೇವದಾಸ್‌ರೈರವರು ಸ್ಪರ್ಧಾಕೂಟವನ್ನು ನಿರೂಪಿಸಿದರು.
ಅವಿಭಜಿತ ದ.ಕ.ಜಿಲ್ಲೆಯ ವಿವಿಧ ವೈದ್ಯಕೀಯ ಶಿಕ್ಷಣ ಕಾಲೇಜಿನ 9 ತಂಡಗಳು ನಿರ್ಣಾಯಕ ಮತ್ತು ಅಂತಿಮ ಸುತಿತಿಗೆ ಪ್ರವೇಶ ಪಡೆದಿದ್ದವು. ಡಾ. ನಿಹಾಲ್ ಶೆಟ್ಟಿ ಸ್ವಾಗತಿಸಿದರು. ಡಾ. ನೈದಿಲಾ ಜೈನ್ ಮತ್ತು ಡಾ.ಗಾಯತ್ರಿ ತೀರ್ಪುಗಾರರಾಗಿ ಸಹಕರಿಸಿದ್ದರು. ಡಾ. ಅಫ್ರಿನ್ ವಾಝ್ ವಂದಿಸಿದರು.