×
Ad

ಅ. 2ರಂದು ಬಂಟ್ವಾಳದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಜಾಥಾ

Update: 2018-09-29 18:24 IST

ಬಂಟ್ವಾಳ, ಸೆ. 29: ಬಂಟ್ವಾಳ ಪುರಸಭೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಜೆಸಿಐ, ಬಂಟ್ವಾಳ ವರ್ತಕರ ವಿವಿದ್ದೋದ್ದೇಶ ಸಹಕಾರಿ ಸಂಘ, ಇದರ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಅ. 2ರಂದು ಬೆಳಗ್ಗೆ 9ರಿಂದ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಥಾ ನಡೆಯಲಿದೆ. ಮೆಲ್ಕಾರ್ ಎಂ.ಎಚ್. ಹೈಟ್‍ನಿಂದ, ಬಿ.ಸಿ.ರೋಡ್ ಪೂಂಜ ಮೈದಾನನಿಂದ ಮತ್ತು ಎಸ್.ವಿ.ಎಸ್ ಕಾಲೇಜು ಬಂಟ್ವಾಳದಿಂದ ಜಾಥಾ ಹೊರಟು ಸ್ಪರ್ಶ ಕಲಾ ಮಂದಿರದಲ್ಲಿ ಸಮಪ್ತಿಗೊಳ್ಳಲಿವೆ.

ಈ ಜಾಥಾ ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭೆಯ ಜನಪ್ರತಿನಿಧಿಗಳು, ಸಮಸ್ತ ನಾಗರಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರ ಸಂಘದವರು, ವಿದ್ಯಾರ್ಥಿಗಳು ಭಾಗವಹಿಸಿ ಬಂಟ್ವಾಳ ನಗರವನ್ನು ಸ್ವಚ್ಛ, ನಿರ್ಮಲ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕಾಗಿ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News