×
Ad

ದ್ವಿಚಕ್ರ ವಾಹನ ಅಪಘಾತ: ಸವಾರ ಮೃತ್ಯು

Update: 2018-09-29 19:48 IST

ಮೂಡುಬಿದಿರೆ, ಸೆ. 29: ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಸವಾರ ಮೃತಪಟ್ಟು, ಸಹಸವಾರೆ ಗಾಯಗೊಂಡಿರುವ ಘಟನೆ ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಮಾರಿಗುಡಿ ಬಳಿಯ ಸಮಗಾರಗುಂಡಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. 

ಅರಮನೆ ಬಾಗಿಲು ನಿವಾಸಿ ಗುರುರಾಜ್ ಭಂಡಾರ್ಕರ್ (23) ಮೃತಪಟ್ಟ ಯುವಕ.

ಈತ ವಿದ್ಯಾಗಿರಿಯಿಂದ ಮೂಡುಬಿದಿರೆ ಕಡೆಗೆ ಸ್ನೇಹಿತೆ ಕೀರ್ತಿ ಪ್ರಭು ಎಂಬಾಕೆಯನ್ನು ತನ್ನ ಸ್ಕೂಟರ್ ನಲ್ಲಿ ಕರೆತರುವಾಗ ಸಮಗಾರಗುಂಡಿಯಲ್ಲಿ ಬಳಿ ದ್ವಿಚಕ್ರವಾಹನ ಸವಾರನ ನಿಯಂತ್ರಣ ತಪ್ಪಿದ್ದು, ಗಂಭೀರ ಗಾಯಗೊಂಡ ಗುರುರಾಜ್‍ನನ್ನು ಆಸ್ಪತ್ರೆಗೆ ದಾಖಲಿಸಲಾದರೂ, ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಕೀರ್ತಿ ಪ್ರಭು ಗಾಯಗೊಂಡಿದ್ದು, ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News