×
Ad

ಉಡುಪಿ: ಕಪ್ಪೆಬಂಡಾಸು ಮೀನುಗಾರಿಕೆ ನಿಷೇಧ

Update: 2018-09-29 19:57 IST

ಉಡುಪಿ, ಸೆ. 29: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ಸಮುದ್ರದಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ, ಬೆಳಕು ಮೀನುಗಾರಿಕೆ ಮತ್ತು ಅವೈಜ್ಞಾನಿಕವಾಗಿ ಪಚ್ಚಿಲೆ ಮೀನುಗಾರಿಕೆ, ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆ ಬಂಡಾಸನ್ನು ಹಿಡಿಯುವುದನ್ನು ಈಗಾಗಲೇ ನಿಷೇಧಿಸಲಾಗಿದ್ದು, ಈ ಕುರಿತು ಎಲ್ಲಾ ಸಂಘ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ.

ಆದುದರಿಂದ ಎಲ್ಲಾ ಮೀನುಗಾರಿಕಾ ದೋಣಿ ಮಾಲಕರು ಹಾಗೂ ಎಲ್ಲಾ ಮೀನುಗಾರರು ಈ ಆದೇಶಗಳನ್ನು ಪಾಲಿಸಿ ಸಹಕರಿಸುವಂತೆ ಕೋರಲಾಗಿದೆ. ಈ ನಿಷೇಧದ ಉಲ್ಲಂಘನೆ ಮಾಡಿದ ದೋಣಿಗಳ ಮಾಲಕರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಮೀನುಗಾರಿಕಾ ಇಲಾಖೆ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News