ಕರೋಪಾಡಿ: ತಾಳಿಪಡ್ಪು ಅಂಗನವಾಡಿ ಕೇಂದ್ರದ ಉದ್ಘಾಟನೆ
Update: 2018-09-29 20:25 IST
ಬಂಟ್ವಾಳ, ಸೆ. 29: ಕರೋಪಾಡಿ ಗ್ರಾಮದ ತಾಳಿಪಡ್ಪು ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ತಾಲೂಕು ಪಂಚಾಯತ್ ಸದಸ್ಯ ಹಾಜಿ ಎ. ಉಸ್ಮಾನ್ ಕರೋಪಾಡಿ, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಪಿ ಸೀತಾರಾಮ ಭಟ್, ಸದಸ್ಯರಾದ ಅನ್ವರ್ ಕರೋಪಾಡಿ, ಇಸ್ಮಾಯಿಲ್ ಸೇರಾಜೆ, ಅಂಗನವಾಡಿ ಮೇಲ್ವಿಚಾರಕಿ ಪುಷ್ಪಲತಾ, ವಿಜಯ ಪೂಜಾರಿ ಮಾಂಬಾಡಿ, ಹರೀಶ್ ರೈ ಮಾಂಬಾಡಿ, ಅಬ್ಬಾಸ್ ಅರಸಳಿಕೆ, ಉಪಸ್ಥಿತರಿದ್ದರು.