×
Ad

ಬಂಟ್ವಾಳ ಬಿಜೆಪಿ ವತಿಯಿಂದ "ಶೌರ್ಯ ದಿವಸ ಕಾರ್ಯಕ್ರಮ"

Update: 2018-09-29 20:27 IST

ಬಂಟ್ವಾಳ, ಸೆ. 29: ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ 2ನೆ ವರ್ಷದ ಅಂಗವಾಗಿ "ಶೌರ್ಯ ದಿವಸ ಕಾರ್ಯಕ್ರಮ" ಬಿಜೆಪಿ ಬಂಟ್ವಾಳ ಕ್ಷೇತ್ರದ ವತಿಯಿಂದ ಬಿ.ಸಿ.ರೋಡಿನಲ್ಲಿರುವಪಕ್ಷದ ಕಚೇರಿಯಲ್ಲಿ ಶನಿವಾರ ಜರಗಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ ಅವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಉಪಾಧ್ಯಕ್ಷ ದೇವಪ್ಪ ಪೂಜಾರಿ, ವಿಜಯ ರೈ, ರಮನಾಥ್ ರಾಯಿ, ಸೀತರಾಮ ಪೂಜಾರಿ, ರಂಜಿತ್ ಮೈರ, ಪುರುಷೋತ್ತಮ ಶೆಟ್ಟಿ, ಹರೀಶ್ ಆಚಾರ್ಯ, ದಿನೇಶ್ ಭಂಡಾರಿ, ಗುರುದತ್ ನಾಯಕ್, ಪುರುಷೋತ್ತಮ ಮಜಲು, ರಮೇಶ್ ರಾವ್ ಮಂಚಿ, ಕೇಶವ, ಉಪಸ್ಥಿತರಿದ್ದರು.

ಇತೀಚೆಗೆ ಹುತಾತ್ಮರಾದ ಯೋಧ ಲಾನ್ಸ್ ನಾಯ್ಕ್ ಸಂದೀಪ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕ್ಷೇತ್ರದ ವಿವಿಧ ಗ್ರಾಮಗಳ 20 ನಿವೃತ್ತ ಯೋಧರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಮಂಚಿ ಗ್ರಾಮದ ನೂಜಿಪಾಡಿ ನಿವಾಸಿ ಲಲಿತಾ ರಾವ್ ಅವರ ಇಬ್ಬರು ಮಕ್ಕಳಾದ ಅನಂತ ರಾವ್, ರಮೇಶ್ ರಾವ್ ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಇವರ ಜೊತೆಯಲ್ಲಿ ಲಲಿತಾ ರಾವ್ ಅವರನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News