ಸಮುದ್ರಕ್ಕಿಳಿದ ವಿಮಾನ: ಓರ್ವ ನಾಪತ್ತೆ
Update: 2018-09-29 20:33 IST
ವೆಲಿಂಗ್ಟನ್, ಸೆ. 29: ಮೈಕ್ರೋನೇಶ್ಯದಲ್ಲಿ ಶುಕ್ರವಾರ ಫೆಸಿಫಿಕ್ ಸಾಗರಕ್ಕೆ ಹೊಂದಿಕೊಂಡ ಕಡಲ್ಕೊಳದಲ್ಲಿ ಇಳಿದ ವಿಮಾನದಿಂದ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಮುಳುಗಿದ ವಿಮಾನದಿಂದ ಎಲ್ಲ 47 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರದೆಗೆಯಲಾಗಿದೆ ಎಂಬುದಾಗಿ ಇದಕ್ಕೂ ಮೊದಲು ಅದು ಹೇಳಿತ್ತು.
ಓರ್ವ ಪುರುಷ ಪ್ರಯಾಣಿಕ ನಾಪತ್ತೆಯಾಗಿರುವುದು ಶನಿವಾರ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ ಎಂದು ಪ್ರಕಟನೆಯೊಂದರಲ್ಲಿ ‘ಏರ್ ನಿಯುಗಿನಿ’ ತಿಳಿಸಿದೆ.
ಚೂಕ್ ವಿಮಾನ ನಿಲ್ದಾಣದಲ್ಲಿ ಇಳಿಯಲು ಯತ್ನಿಸುತ್ತಿದ್ದ ವಿಮಾನ ರನ್‌ವೇಯನ್ನು ತಪ್ಪಿಸಿಕೊಂಡು ಸಮುದ್ರದಲ್ಲಿ ಇಳಿದಿತ್ತು. ವಿಮಾನದ ಇತರ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳೀಯ ಮೀನುಗಾರರು ದೋಣಿಗಳ ಮೂಲಕ ರಕ್ಷಿಸಿದ್ದರು.