×
Ad

ಅಮೇಥಿಯ ರೇಲ್ ನೀರ್ ಸ್ಥಾವರ 2015ರಲ್ಲಿ ಆರಂಭಗೊಂಡಿತ್ತು: ರೈಲ್ವೆ ಮೂಲಗಳು

Update: 2018-09-29 20:35 IST

ಹೊಸದಿಲ್ಲಿ,ಸೆ.29: ಅಮೇಥಿಯಲ್ಲಿನ ರೇಲ್ ನೀರ್ ಸ್ಥಾವರವು 2014ರಲ್ಲಿ ಆರಂಭಗೊಂಡಿತ್ತು ಎಂಬ ಕಾಂಗ್ರೆಸ್ ಹೇಳಿಕೆಯನ್ನು ಶನಿವಾರ ತಳ್ಳಿಹಾಕಿರುವ ರೈಲ್ವೆ ಮೂಲಗಳು,ಅದನ್ನು ಐಆರ್‌ಸಿಟಿಸಿ 2015ರಲ್ಲಿ ಆರಂಭಿಸಿತ್ತು ಎಂದು ಹೇಳಿವೆ.

ಈ ಸ್ಥಾವರವನ್ನು 2014ರಲ್ಲಿ ಆರಂಭಿಸಲಾಗಿತ್ತು ಎಂದು ಶುಕ್ರವಾರ ಕಾಂಗ್ರೆಸ್ ಟ್ವೀಟಿಸಿತ್ತು. ಆದರೆ ಸ್ಥಾವರವು 2015ರಲ್ಲಿ ಆರಂಭಗೊಂಡಿತ್ತು ಎಂದು ನಂತರ ಬಿಜೆಪಿ ಟ್ವೀಟಿಸಿತ್ತು.

2010-11ನೇ ಸಾಲಿನ ಮುಂಗಡಪತ್ರದಲ್ಲಿ ಈ ಸ್ಥಾವರ ನಿರ್ಮಾಣವನ್ನು ಪ್ರಕಟಿಸಲಾಗಿತ್ತು ಮತ್ತು ಚುನಾವಣೆಗೆ ಸ್ವಲ್ಪವೇ ಮೊದಲು 2014, ಫೆಬ್ರವರಿಯಲ್ಲಿ ಅದರ ಶಿಲಾನ್ಯಾಸ ನೆರವೇರಿತ್ತು. 2015,ಜೂನ್‌ನಲ್ಲಿ ಐಅರ್‌ಸಿಟಿಸಿ ಅದನ್ನು ಕಾರ್ಯಾರಂಭಗೊಳಿಸಿತ್ತು ಎಂದು ಬಲ್ಲ ಅಧಿಕಾರಿಗಳು ತಿಳಿಸಿದರು.

ಅಮೇಥಿ ಜಿಲ್ಲೆಯ ತಿಕರಿಯಾದಲ್ಲಿರುವ ಈ ಸ್ಥಾವರವು ಭಾರತೀಯ ರೈಲ್ವೆಗಾಗಿ ಪ್ರತಿದಿನ 72,000 ಕುಡಿಯುವ ನೀರಿನ ಬಾಟಲ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News