×
Ad

ಶಬರಿಮಲೆ: ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಉಡುಪಿ ಜಿಪಂ ಉಪಾಧ್ಯಕ್ಷೆ ಸ್ವಾಗತ

Update: 2018-09-29 21:38 IST

ಉಡುಪಿ, ಸೆ.29: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಸುಪ್ರೀಂ ಕೋರ್ಟು ನೀಡಿದ ತೀರ್ಪು ಸ್ವಾಗತಾರ್ಹ. ದೇವರ ಮುಂದೆ ಸ್ತ್ರೀ-ಪುರುಷ ಭಕ್ತರಲ್ಲಿ ಭೇದವಿಲ್ಲ. ಈ ಚರಿತ್ರಾರ್ಹ ತೀರ್ಪನ್ನು ಮಹಿಳಾ ಸಮುದಾಯ ಸಂತೋಷದಿಂದ ಸ್ವಾಗತಿಸುತ್ತದೆ ಎಂದು ಉಡುಪಿ ಜಿಪಂನ ಉಪಾಧ್ಯಕ್ಷೆ ಹಾಗೂ ಹಿರಿಯ ಬಿಜೆಪಿ ನಾಯಕಿ ಶೀಲಾ ಕೆ.ಶೆಟ್ಟಿ ತಿಳಿಸಿದ್ದಾರೆ.

ದೇವಾಲಯಕ್ಕೆ ಹೇಗೆ, ಯಾವಾಗ ಹೋಗಬೇಕು ಎಂಬುದನ್ನು ಹೆಣ್ಣು ಮಕ್ಕಳಿಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಸ್ತ್ರೀ ಸಮುದಾಯ ಈ ವಿಷಯವನ್ನು ತಮ್ಮ ಹಿರಿಯರ ಮಾರ್ಗದರ್ಶನದಿಂದ ತಿಳಿದುಕೊಂಡಿದ್ದಾರೆ. ಹೀಗಾಗಿ ಇಲ್ಲಿ ಎಲ್ಲಾ ವಯಸ್ಸಿನವರೂ ದೇವರ ದರ್ಶನಕ್ಕೆ ಅರ್ಹರು ಎಂಬು ದನ್ನು ನಾವು ತಿಳಿದುಕೊಳ್ಳಬೇಕು. ಇಂತಹ ತೀರ್ಪಿನಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರಲ್ಲಿ ಕೀಳರಿಮೆ ಎಂದೂ ಬರಲಾರದು ಎಂದು ಶೀಲಾ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News